Bengaluru, ಮಾರ್ಚ್ 1 -- Sankranthiki Vasthunam ott: ದಗ್ಗುಬಾಟಿ ವೆಂಕಟೇಶ್‌, ಮೀನಾಕ್ಷಿ ಚೌಧರಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಸಂಕ್ರಾಂತಿಕಿ ವಸ್ತುನಾ (Sankranthi Vasthunna ) ಸಿನಿಮಾವು ಇಂದು (ಮಾರ್ಚ್‌ 1) ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನ ಕಂಡ ಈ ಸಿನಿಮಾವನ್ನು ಒಟಿಟಿ ಸಿನಿಮಾ ಪ್ರಿಯರು ಜೀ5ನಲ್ಲಿ ನೋಡಬಹುದು. ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದ ಈ ಸಿನಿಮಾ ಒಟಿಟಿಯಲ್ಲಿ ವಿಳಂಬವಾಗಿ ಬಿಡುಗಡೆಯಾಗಬಹುದು ಎನ್ನಲಾಗಿತ್ತು. ಆದರೆ, ಮಾರ್ಚ್‌ 1ರಂದು ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಈ ತೆಲುಗು ಸಿನಿಮಾವನ್ನು ಜೀ5ನಲ್ಲಿ ಕನ್ನಡದಲ್ಲಿಯೂ ನೋಡಬಹುದು. ಸಂಕ್ರಾಂತಿಕಿ ವಸ್ತುನಾಂ ಜೀ 5ನಲ್ಲಿ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸ್ಟ್ರೀಮಿಂಗ್ ಆಗಲಿದೆ.

ಮಾಜಿ ಗೆಳತಿ ಎಸಿಪಿ ಮೀನಾಕ್ಷಿ ಮಾಜಿ ಡೆಪ್ಯುಟಿ ಕಮಿಷನರ್‌ ವೈ.ಡಿ. ರಾಜು ಅವರಲ್ಲಿ ಸಹಾಯವೊಂದನ್ನು ಕೇಳುತ್ತಾಳೆ. ರಾಜ್ಯದ ಆಡಳಿತ ಪಕ್ಷದ ಪ್ರೆಸಿಡೆಂಟ್‌ ಅವರ ತೋಟದ...