Bengaluru, ಏಪ್ರಿಲ್ 14 -- ವಿಶ್ವಾವಸುನಾಮ ಸಂವತ್ಗರದ ಮೊದಲ ಸಂಕಷ್ಟಹರ ಗಣಪತಿ ವ್ರತವು ಏಪ್ರಿಲ್ ತಿಂಗಳ 16 ನೆಯ ದಿನಾಂಕ, ಬುಧವಾರ ಬರಲಿದೆ. ಈ ವ್ರತವನ್ನು ಆಚರಿಸುವುದು ಬಲುಮುಖ್ಯವಾಗುತ್ತದೆ. ಸೂರ್ಯನು ಮೇಷರಾಶಿಯಲ್ಲಿ ಶಕ್ತಿಶಾಲಿಯಾಗಿ ಸಂಚರಿಸುತ್ತಿದ್ದಾನೆ. ಆದ್ದರಿಂದ ಈ ದಿನ ಶ್ರೀಸೂರ್ಯ ದೇವರ ಪೂಜೆಯನ್ನು ಮಾಡಿದಲ್ಲಿ ಆರೋಗ್ಯದಲ್ಲಿನ ಸಮಸ್ಯೆಗಳು ಬಗೆಹರಿಯುತ್ತವೆ. ಕುಟುಂಬದ ಹಿರಿತನವು ನಿಮ್ಮದಾಗುತ್ತದೆ. ಮನೆತನದ ಹಿರಿಯರ ಜೊತೆಯಲ್ಲಿ ಉತ್ತಮ ಬಾಂಧವ್ಯ ಬೆಳೆಯುತ್ತದೆ. ಮನದಲ್ಲಿನ ದುಗುಡವು ದೂರವಾಗುತ್ತದೆ. ರವಿಯು ಅಶ್ವಿನಿ ನಕ್ಷತ್ರದಲ್ಲಿ ನೆಲೆಸಿದ್ದಾನೆ. ಅಶ್ವಿನಿ ಕೇತುವಿನ ನಕ್ಷತ್ರವಾಗುತ್ತದೆ.

ಆದ್ದರಿಂದ ಪೂಜೆಯ ನಂತರ ಗಣಪತಿ ದೇಗುಲಕ್ಕೆ ಹುರುಳಿ ಮತ್ತು ಮಿಶ್ರವರ್ಣದ ವಸ್ತ್ರವನ್ನು ಕಾಣಿಕೆಯೊಂದಿಗೆ ನೀಡಬೇಕು. ಆ ದಿನದಂದು ಅನೂರಾದ ನಕ್ಷತ್ರವಿದೆ ಆದ್ದರಿಂದ ಶ್ರೀ ಹನುಮಂತನ ಪೂಜೆಯಿಂದ ನಿದಾನಗತಿಯಲ್ಲಿ ಸಾಗುತ್ತಿರುವ ಕೆಲಸ ಕಾರ್ಯಗಳು ಪ್ರಗತಿಯತ್ತ ಸಾಗುತ್ತವೆ. ಚಂದ್ರೋದಯವು ರಾತ್ರಿ 9.18 ಘಂಟೆ ಆಗಲಿದೆ. ಆದ...