ಭಾರತ, ಮಾರ್ಚ್ 14 -- ಬೆಂಗಳೂರು: ಭಾರತದ ಸ್ಯಾಂಡ್‌ವಿಚ್‌ ತಲೆಮಾರು (ಮಧ್ಯಮ ವಯಸ್ಸಿನ) ತಮ್ಮ ಸ್ವಂತ ಭವಿಷ್ಯದ ಸಿದ್ಧತೆ ಮಾಡಿಕೊಂಡಿಲ್ಲ ಎಂಬುದು ತಿಳಿದುಬಂದಿದೆ. ಎಡಲ್ವೈಝ್ ಲೈಫ್ ಇನ್ಶುರೆನ್ಸ್ ಅಧ್ಯಯನದಲ್ಲಿ "ನಾನು ಎಷ್ಟು ಉಳಿಸಿದರೂ ಅಥವಾ ಹೂಡಿಕೆ ಮಾಡಿದರೂ ಭವಿಷ್ಯಕ್ಕೆ ಸಾಲುತ್ತದೆ ಎಂದು ಅನಿಸುವುದೇ ಇಲ್ಲ" ಎಂದು ಶೇಕಡ 60 ಜನರು ಅಭಿಪ್ರಾಯಪಟ್ಟಿದ್ದಾರೆ.

35 - 54 ವರ್ಷ ವಯಸ್ಸಿನ ಜನರನ್ನು ಸ್ಯಾಂಡ್‌ವಿಚ್ ಜನರೇಷನ್‌ ಎಂದು ಸಾಮಾನ್ಯವಾಗಿ ಪರಿಗಣಿಸಲಾಗಿದೆ. ತಮ್ಮ ವಯಸ್ಸಾದ ಪಾಲಕರು ಮತ್ತು ಬೆಳೆಯುತ್ತಿರುವ ಮಕ್ಕಳನ್ನು ಒಳಗೊಂಡ ಎರಡು ತಲೆಮಾರಿನ ಜನರು ಇವರ ಮೇಲೆ ಅವಲಂಬಿತರಾಗಿರುತ್ತಾರೆ.

ಯುಗವ್‌ ಸಹಭಾಗಿತ್ವದಲ್ಲಿಎಡಲ್ವೈಝ್ ಲೈಫ್ ಕಂಪನಿಯು ಈ ತಲೆಮಾರಿನ 4005 ಜನರನ್ನು ಸಮೀಕ್ಷೆ ನಡೆಸಿದೆ. 12 ನಗರಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ. ಈ ತಲೆಮಾರಿನ ಜನರ ವರ್ತನೆಗಳು, ನಂಬಿಕೆಗಳು ಮತ್ತು ಆರ್ಥಿಕ ಸಿದ್ಧತೆಯ ಮಟ್ಟವನ್ನು ಅರ್ಥ ಮಾಡಿಕೊಳ್ಳುವುದು ಅಧ್ಯಯನದ ಗುರಿಯಾಗಿದೆ.

"ಕಳೆದ ಹಲವು ವರ್ಷಗಳಿಂದ ನಮ್ಮ ಗ್ರಾಹಕರ ಜ...