Bangalore, ಮಾರ್ಚ್ 11 -- Sandalwood News: 'ಜೆಂಟಲ್‍ಮ್ಯಾನ್‍' ಚಿತ್ರದ ಅಭಿನಯಕ್ಕಾಗಿ ಪ್ರಜ್ವಲ್‍ ದೇವರಾಜ್‍ ಹಾಗೂ 'ಪಿಂಕಿ ಎಲ್ಲಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಅಕ್ಷತಾ ಪಾಂಡವಪುರ ಅವರು 2020ನೇ ಸಾಲಿನ ಅತ್ಯುತ್ತಮ ನಟ-ನಟಿಗೆ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪೃಥ್ವಿ ಕೊಣನೂರು ನಿರ್ದೇಶನದ 'ಪಿಂಕಿ ಎಲ್ಲಿ' ಚಿತ್ರವು ಅತ್ಯುತ್ತಮ ಚಿತ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ. 2020ನೇ ಸಾಲಿನ ಪ್ರಶಸ್ತಿಗಳಿಗೆ ಒಟ್ಟು 66 ಚಿತ್ರಗಳನ್ನು ವೀಕ್ಷಿಸಿರುವ ಬಿ.ಎಸ್‍. ಲಿಂಗದೇವರು ನೇತೃತ್ವದ ಆಯ್ಕೆಸಮಿತಿಯು, 'ಪಿಂಕಿ ಎಲ್ಲಿ', 'ವರ್ಣಪಟಲ' ಮತ್ತು 'ಹರಿವ ನದಿಗೆ ಮೈಯೆಲ್ಲಾ ಕಾಲು' ಚಿತ್ರಗಳಿಗೆ ಮೊದಲ ಮೂರು ಅತ್ಯುತ್ತಮ ಪ್ರಶಸ್ತಿಗಳನ್ನು ನೀಡಿದೆ. 'ಗಿಳಿಯು ಪಂಜರದೊಳಿಲ್ಲ' ಮತ್ತು 'ಈ ಮಣ್ಣು' ಚಿತ್ರಗಳು ಅತ್ಯುತ್ತಮ ಸಾಮಾಜಿಕ ಚಿತ್ರಗಳಾಗಿ ಹೊರಹೊಮ್ಮಿದರೆ, ಅಚ್ಯುತ್‍ ಕುಮಾರ್‍ ಅಭಿನಯದ 'ಫೋರ್‍ ವಾಲ್ಸ್' ಚಿತ್ರವು ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ ಎಂದನಿಸಿಕೊಂಡಿದೆ. ಇನ್ನು, ಸಂಚಾರಿ ವಿಜಯ್‍ ಅವರಿಗೆ 'ತಲೆದಂಡ' ಚಿ...