Bangalore, ಮಾರ್ಚ್ 21 -- Sandalwood News: ರೆಬೆಲ್‌ಸ್ಟಾರ್‌ ಅಂಬರೀಷ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿದ್ದ ಮಂಡ್ಯದ ಗಂಡು ಚಲನಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರೂ ಆಗಿದ್ದ ಎ.ಟಿ.ರಘು ಬೆಂಗಳೂರಿನಲ್ಲಿ ಶುಕ್ರವಾರ ನಿಧನರಾಗಿದ್ದಾರೆ.ಳೆದ ನಾಲ್ಕೈದು ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಎಟಿ ರಘು ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇದರ ನಡುವೆ ಕೆಲ ದಿನಗಳಿಂದ ಅವರ ಆರೋಗ್ಯ ಇನ್ನಷ್ಟು ಹದಗೆಟ್ಟಿತ್ತು. ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ರಘು ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ನಿರ್ದೇಶನದ ಜತೆಗೆ ಕೆಲವು ಚಿತ್ರಗಳನ್ನು ಅವರು ನಿರ್ಮಾಣ ಕೂಡ ಮಾಡಿದ್ದರು. ಮಂಡ್ಯದ ಗಂಡು' ಸೇರಿದಂತಹ 55 ಸಿನಿಮಾ ಗಳನ್ನು ನಿರ್ದೇಶನ ಮಾಡಿರುವುದು ರಘು ಅವರ ಹಿರಿಮೆ. ಅದರಲ್ಲೂ ಅಂಬರೀಷ್‌ ಜತೆಯಲ್ಲಿಯೇ ಹೆಚ್ಚು ಚಿತ್ರಗಳನ್ನು ಮಾಡಿರುವುದು ರಘು ವಿಶೇಷ.

1990ರಲ್ಲಿ ಅಜಯ್-ವಿಜಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ್ದರು ರಘು. ಇನ್ಸ್ ಪೆಕ್ಟರ್ ಕ್ರಾಂತಿ ಕುಮ...