ಭಾರತ, ಮಾರ್ಚ್ 29 -- Salman Khan OTT Movies: ನಾಳೆ (ಮಾರ್ಚ್‌ 30) ಸಿಕಂದರ್‌ ಸಿನಿಮಾ ಬಿಡುಗಡೆಯಾಗಲಿದೆ. ಸಿಕಂದರ್‌ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ನೋಡಲು ಸಾಕಷ್ಟು ಜನರು ಕಾಯುತ್ತಿರಬಹುದು. ಒಟಿಟಿಯಲ್ಲಿ ನೋಡಬಹುದಾದ ಹತ್ತು ಸಿನಿಮಾಗಳ ವಿವರ ಇಲ್ಲಿದೆ. ಈ ವೀಕೆಂಡ್‌ನಲ್ಲಿ ಅಮೆಜಾನ್‌ ಪ್ರೈಮ್‌ ವಿಡಿಯೋ, ಆಪಲ್‌ ಟಿವಿ, ಜೀ5, ನೆಟ್‌ಫ್ಲಿಕ್ಸ್‌, ಜಿಯೋಹಾಟ್‌ಸ್ಟಾರ್‌ ಮುಂತಾದ ಒಟಿಟಿಗಳಲ್ಲಿ ಈ ಸಿನಿಮಾ ನೋಡಬಹುದು.

ಏಕ್‌ ತಾ ಟೈಗರ್‌ : ಈ ಸಿನಿಮಾವನ್ನು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ನೋಡಬಹುದು. ಸಲ್ಮಾನ್‌ ಖಾನ್‌ ನಟಿಸಿರುವ ಈ ಚಿತ್ರವನ್ನು ಅಮೆಜಾನ್‌ ಪ್ರೈಮ್‌ ವಿಡಿಯೋದಲ್ಲಿ ವೀಕ್ಷಿಸಬಹುದು. ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ ಪತ್ತೆದಾರಿಯಾಗಿ ನಟಿಸಿದ್ದರು.

ವಾಂಟೆಡ್‌: ವಾಂಟೆಡ್‌ 2009ರಲ್ಲಿ ಬಿಡುಗಡೆಯಾದ ಸಲ್ಮಾನ್‌ ಖಾನ್‌ ಸಿನಿಮಾ. ಈ ಆಕ್ಷನ್‌ ಥ್ರಿಲ್ಲರ್‌ ಸಿನಿಮಾಕ್ಕೆ ಪ್ರಭುದೇವ ಆಕ್ಷನ್‌ ಕಟ್‌ ಹೇಳಿದ್ದರು. ಬೋನಿ ಕಪೂರ್‌ ನಿರ್ಮಾಣ ಮಾಡಿದ್ದಾರೆ. ಇದು ತೆಲುಗಿನ ಪೋಕಿರಿ ಸಿನಿಮಾದ ಹಿಂದಿ ರಿಮೇ...