Bengaluru, ಮಾರ್ಚ್ 20 -- Salary Hike: ಕರ್ನಾಟಕದ ಸಿಎಂ, ಸಚಿವರು, ಶಾಸಕರು ಈಗ ಪಡೆಯುತ್ತಿರುವ ವೇತನ ಮತ್ತು ಭತ್ಯೆಯನ್ನು ಶೇಕಡ 100 ಹೆಚ್ಚಿಸಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ. ಇದಕ್ಕೆ ಸಂಬಂಧಿಸಿದ ಕರ್ನಾಟಕ ಸಚಿವರ ವೇತನ ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025 ಮತ್ತು ಕರ್ನಾಟಕ ಶಾಸಕಾಂಗ ಸದಸ್ಯರ ವೇತನ, ಪಿಂಚಣಿ ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2025 ಎಂಬ ಎರಡು ಮಸೂದೆಗಳನ್ನು ಸರ್ಕಾರ ವಿಧಾನ ಮಂಡಲದಲ್ಲಿ ಮಂಡಿಸಲು ಮುಂದಾಗಿದೆ.

ಸದ್ಯದ ಮಾಹಿತಿ ಪ್ರಕಾರ, ಶಾಸಕರ ವೇತನ 40,000 ದಿಂದ 80,000 ರೂಪಾಯಿ, ವಿಧಾನಸಭಾಧ್ಯಕ್ಷರ ಮತ್ತು ವಿಧಾನ ಪರಿಷತ್‌ ಸಭಾಪತಿ ವೇತನ 75,000ದಿಂದ 1.25 ಲಕ್ಷ ರೂಪಾಯಿ, ಸಚಿವರ ವೇತನ 60,000 ದಿಂದ 1.25 ಲಕ್ಷ ರೂಪಾಯಿ, ಮುಖ್ಯಮಂತ್ರಿಯ ವೇತನ 75,000 ದಿಂದ 1.50 ಲಕ್ಷ ರೂಪಾಯಿಗೆ ಹೆಚ್ಚಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದೆ. ಆ ಮೂಲಕ, ಸಿಎಂ, ಸಚಿವರು, ಶಾಸಕರ ವೇತನ ಶೇಕಡ 100 ಹೆಚ್ಚಳವಾಗಲಿದೆ.

ಶಾಸಕರು, ವಿಧಾನ ಪರಿಷತ್‌ ಸದಸ್ಯರು, ವಿಧಾನ ಸಭಾಧ್ಯಕ್ಷರು, ಸಭಾಪತಿ,...