Bangalore, ಏಪ್ರಿಲ್ 12 -- ಸರಿಗಮಪ ಕನ್ನಡ ರಿಯಾಲಿಟಿ ಶೋನಲ್ಲಿ ಈ ವಾರ ಡಿವೋಷನಲ್‌ ರೌಂಡ್‌ ಅಂದ್ರೆ ದೈವಿಕ ಗಾಯನ ಸ್ಪರ್ಧೆ ನಡೆಯುತ್ತಿದೆ. ಈ ಸಂದರ್ಭದಲ್ಲಿ ಸ್ಪರ್ಧಿಗಳು ಒಬ್ಬರಿಗಿಂತ ಒಬ್ಬರು ಅದ್ಭುತವಾಗಿ ಹಾಡುತ್ತ ನೋಡುಗರನ್ನು ಮಂತ್ರಮುಗ್ಧರಾಗಿಸಿದ್ದಾರೆ.

Sa Re Ga Ma Pa Kannada: ಈ ಸಮಯದಲ್ಲಿ ಶಿವಮೊಗ್ಗದ ಕಾರ್ತಿಕ್‌ "ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ಮನವೆಂಬ ಮಲ್ಲಿಗೆಯ ಹೂವ ಹಾಸಿಗೆ ಮೇಲೆ ಪವಡಿಸು ಪರಮಾತ್ಮ ಶ್ರೀ ವೆಂಕಟೇಶ ... ಸಪ್ತಗಿರಿವಾಸ" ಎಂದು ಭಕ್ತಿಗೀತೆ ಹಾಡಿದ್ದಾರೆ. ಆ ಸಮಯದಲ್ಲಿ ಎಲ್ಲರೂ ಅಚ್ಚರಿಗೊಳ್ಳುವಂತೆ ವೆಂಕಟೇಶ್ವರ ದೇವರೇ ಪ್ರತ್ಯಕ್ಷಗೊಂಡಿದ್ದಾರೆ.

ಜೀ ಕನ್ನಡ ವಾಹಿನಿಯು ಸರೆಗಮಪ ಡಿವೋಷನಲ್‌ ರೌಂಡ್‌ನ ಪ್ರೊಮೊ ಬಿಡುಗಡೆ ಮಾಡಿದೆ. ಇಂದು ಮತ್ತು ನಾಳೆ ಜೀ ಕನ್ನಡದಲ್ಲಿ ಪ್ರಸಾರವಾಗುವ ಸರೆಗಮಪ ಕನ್ನಡದಲ್ಲಿ ಪ್ರೇಕ್ಷಕರು ಭಕ್ತಿಪರವಶಗೊಳ್ಳುವುದು ಖಾತ್ರಿಯಾಗಿದೆ.

ಶಿವಮೊಗ್ಗದ ಕಾರ್ತಿಕ್‌ ಹಾಡುವ ಸಮಯದಲ್ಲಿ ಪರದೆಯ ಮೇಲಿಂದ ವೆಂಕಟೇಶ ದೇವರು ಪ್ರತ್ಯಕ್ಷರಾಗಿದ್ದಾರೆ. ಗ್ರಾಫಿಕ್ಸ್‌ ಮೂಲ...