Delhi, ಮಾರ್ಚ್ 13 -- Russia Ukraine War: ಮೂರು ತಿಂಗಳ ಹಿಂದೆ ನಡೆದ ಅಮೆರಿಕ ಚುನಾವಣೆ, ಆನಂತರ ಅಧಿಕಾರ ಸ್ವೀಕಾರ ಸಮಾರಂಭದ ಬಳಕ ಅಲ್ಲಿನ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳುತ್ತಲೇ ಇದ್ದರು. ಸದ್ಯವೇ ರಷ್ಯಾ ಹಾಗೂ ಉಕ್ರೇನ್‌ ಯುದ್ದ ಅಂತ್ಯವಾಗಲಿದೆ ಎನ್ನುವ ಮಾತುಗಳನ್ನು ಪದೇ ಪದೇ ಉಚ್ಚರಿಸುತ್ತಿದ್ದರು. ಎರಡು ದಿನದ ಹಿಂದೆಯೂ ಎಕ್ಸ್‌ನಲ್ಲೂ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಏಕೆಂದರೆ ಟ್ರಂಪ್‌ ಮೊದಲ ಗುರಿ ಇದ್ದುದೇ ಮೂರು ವರ್ಷದಿಂದ ನಿರಂತರವಾಗಿ ನಡೆದಿರುವ ರಷ್ಯಾ ಉಕ್ರೇನ್‌ ದೇಶಗಳ ಯುದ್ದಕ್ಕೆ ಕೊನೆ ಹಾಡುವುದು. ಈ ಮೂಲಕ ತನ್ನ ಮಾತಿಗೆ ಬೆಲೆ ಇದೆ ಎನ್ನುವುದನ್ನು ಜಾಗತಿಕ ಮಟ್ಟದಲ್ಲಿ ತೋರಿಸಿಕೊಳ್ಳುವುದು ಟ್ರಂಪ್‌ ಉದ್ದೇಶವೂ ಆಗಿದೆ. ಇದರೊಟ್ಟಿಗೆ ಅಮೆರಿಕ ಸೇರಿದಂತೆ ಜಗತ್ತಿನ ಹಲವು ದೇಶಗಳು ಮೂರು ವರ್ಷದಲ್ಲಿ ಉಕ್ರೇನ್‌ಗೆ ಆರ್ಥಿಕ ನೆರವು ನೀಡುತ್ತಲೇ ಬಂದಿವೆ. ಈಗಾಗಲೇ ಕೋಟಿಗಟ್ಟಲೇ ಆರ್ಥಿಕ ನೆರವು ನೀಡಿಯೂ ಆಗಿದೆ. ಆದರೆ ಅತ್ತ ಯುದ್ದವೂ ನಿಲ್ಲುತ್ತಿಲ್ಲ. ಇತ್ತ ಆರ್ಥಿಕ ನೆರವು ನೀಡುವುದು ತಗ್ಗುತ್...