Bangalore, ಮಾರ್ಚ್ 25 -- RRR Movie: ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಆರ್‌ಆರ್‌ಆರ್‌ ಸಿನಿಮಾ ಇಂದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ರಾಮ್‌ ಚರಣ್‌ ಮತ್ತು ಜೂನಿಯರ್‌ ಎನ್‌ಟಿಆರ್‌ ಅಭಿನಯದ ಈ ಸಿನಿಮಾದ ತುಣುಕುಗಳನ್ನು, ನಾಟು ನಾಟು ಹಾಡಿನ ದೃಶ್ಯಗಳನ್ನು ಹಂಚಿಕೊಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಇವರ ಸಂತೋಷಕ್ಕೆ, ಖುಷಿಗೆ ಕಾರಣವಾದ ಒಂದು ವಿಷಯವಿದೆ. ಅದೆಂದರೆ, ಆರ್‌ಆರ್‌ಆರ್‌ ಸಿನಿಮಾ ಆಗಮಿಸಿ ಮೂರು ವರ್ಷಗಳಾಗಿವೆ. ಹೌದು, ಈ ಸಿನಿಮಾ ಬಿಡುಗಡೆಯಾಗಿ ಇಂದು ಮೂರನೇ ವಾರ್ಷಿಕೋತ್ಸವ. ಈ ಖುಷಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಜನರು ಹಂಚಿಕೊಳ್ಳುತ್ತಿದ್ದಾರೆ.

"ಈ ಎಪಿಕ್‌ ಸಿನಿಮಾ ಆಗಮಿಸಿ ಮೂರು ವರ್ಷಗಳಾಗಿವೆ. ಭಾರತದ ಚಿತ್ರರಂಗದಲ್ಲಿಯೇ ನೆನಪಿನಲ್ಲಿಟ್ಟುಕೊಳ್ಳಬೇಕಾದ ಸಿನಿಮಾ" "ಚರಣ್‌ ಅವರು ಪೊಲೀಸ್‌ ಆಗಿ ಅದ್ಭುತವಾಗಿ ನಟಿಸಿದ ಚಿತ್ರ. ತನ್ನ ಲುಕ್‌, ತನ್ನ ನಟನೆಯಿಂದ ಈ ಪಾತ್ರಕ್ಕೆ ಜೀವ ತುಂಬಿದ್ದರು. ಅವರ ಅಭಿನಯ ಅದ್ಭುತ, ಕಣ್ಣೀರು ತರಿಸುವಂತೆ ನಟಿಸಿದ್ದರು" "ಇಂತಹ ಅದ್ಭುತ ಸಿನಿಮಾ ನ...