ಭಾರತ, ಮಾರ್ಚ್ 25 -- ಐಪಿಎಲ್‌ 2025ರ ಮೊದಲ ಪಂದ್ಯದಲ್ಲಿ ಸೋತ ಎರಡ ತಂಡಗಳು ಮೊದಲ ಗೆಲುವಿಗಾಗಿ ಮುಖಾಮುಖಿಯಾಗುತ್ತಿವೆ. ಸೀಸನ್‌ 18ರ ಆರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ (RR) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಪರಸ್ಪರ ಎದುರಾಗುತ್ತಿವೆ. ಮಾರ್ಚ್ 26 ರಂದು ಸಂಜೆ 7:30 ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಇದು ರಾಜಸ್ಥಾನ ತಂಡಕ್ಕೆ ತವರು ಮೈದಾನವಾಗಿದ್ದು, ಉಭಯ ತಂಡಗಳು ಟೂರ್ನಿಯಲ್ಲಿ ಮೊದಲ ಗೆಲುವು ಸಂಪಾದಿಸುವ ನಿರೀಕ್ಷೆಯಲ್ಲಿವೆ.

ಕೊನೆಯ ಪಂದ್ಯದಲ್ಲಿ ಎಸ್‌ಆರ್‌ಎಚ್‌ ವಿರುದ್ಧ ರಾಜಸ್ಥಾನ್‌ ರಾಯಲ್ಸ್‌ (Rajasthan Royals) 44 ರನ್‌ಗಳ ಸೋಲು ಕಂಡರೆ, ಕೆಕೆಆರ್‌ (Kolkata Knight Riders) ತಂಡವು ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಹಿನ್ನಡೆ ಅನುಭವಿಸಿತು. ತನ್ನ ತವರು ಮೈದಾನದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.

ಈ ಪಂದ್ಯವು ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಲ್ಲಿ ಹೆಚ್ಚು ಐಪಿಎಲ್ ಪಂದ್ಯಗಳು ನಡೆದಿಲ್ಲ. ಕೋವಿಡ್‌ ನಂತರ ಪ್ರತಿ ಋತುವಿನಲ್ಲಿ ರಾಜಸ್ಥ...