ಭಾರತ, ಫೆಬ್ರವರಿ 8 -- ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಅದಕ್ಕೂ ಮುನ್ನ ವಿವಿಧ ದಿನಗಳ ಸಂಭ್ರಮದಲ್ಲಿ ಪ್ರೇಮಿಗಳು ಮಿಂದೇಳುತ್ತಿದ್ದಾರೆ. ಫೆಬ್ರುವರಿ 7ರಂದು ಗುಲಾಬಿ ದಿನ (Rose Day) ಆಚರಣೆ ಮಾಡಲಾಗಿದ್ದು, ದೇಶದಲ್ಲಿ ಗುಲಾಬಿ ಮಾರಾಟ ಜೋರಾಗಿ ಆಗಿದೆ. ಮಹಾರಾಷ್ಟ್ರದ ಎರಡನೇ ಅತಿ ದೊಡ್ಡ ನಗರ ಪುಣೆಯಲ್ಲಿಯೂ ಹೂವು ವ್ಯಾಪಾರಿಗಳು ಭರ್ಜರಿ ಲಾಭ ಗಳಿಸಿದ್ದಾರೆ. ಗುಲಾಬಿ ಹೂ ಮಾರಾಟದಲ್ಲಿ ಭಾರಿ ಏರಿಕೆ ಕಂಡು ಬಂದಿದ್ದು, ನಗರದಲ್ಲಿ ದಿನವಿಡೀ ಸಾವಿರಾರು ಗುಲಾಬಿಗಳು ಮಾರಾಟವಾಗಿವೆ. ಪ್ರೇಮಿಗಳ ದಿನದ ಸಿದ್ಧತೆ ನಡುವೆ ಪ್ರತಿ ದಿನಗಳನ್ನು ಜೋಡಿ ಹಕ್ಕಿಗಳು ಖುಷಿಯಿಂದ ಆಚರಿಸುತ್ತಿರುವ ಸುಳಿವು ಸಿಗುತ್ತಿದೆ.

ಪುಣೆಯ ಎಫ್‌ಸಿ ರಸ್ತೆಯಿಂದ ಹಿಡಿದು ಪಕ್ಕದ ಪಿಂಪ್ರಿ ಮಾರುಕಟ್ಟೆಯಲ್ಲೂ, ಗುಲಾಬಿ ಹೂ ಖರೀದಿಗೆ ಯುವ ಜನತೆ ಮುಗಿಬಿತ್ತು. ಪ್ರತಿಯೊಂದು ಬಣ್ಣದಲ್ಲೂ ಗುಲಾಬಿ ಗೂವುಗಳಿಗೆ ಅಗಾಧ ಬೇಡಿಕೆ ಸೃಷ್ಟಿಯಾಗಿತ್ತು. ಹೂ ವ್ಯಾಪಾರಿಗಳು ತಮ್ಮ ಗ್ರಾಹಕರು ಕೇಳುವ ಹೂವುಗಳನ್ನು ಪೂರೈಸುವಲ್ಲಿ ನಿರತರಾಗಿದ್ದರು. ಪ್ರೇಮಿಗಳ ವಾರದ ಆರಂಭ...