ಭಾರತ, ಫೆಬ್ರವರಿ 7 -- 2025ರ ವ್ಯಾಲೆಂಟೈನ್ಸ್ ವೀಕ್ ಇಂದಿನಿಂದ ಆರಂಭ. ಫೆಬ್ರುವರಿ 14 ಪ್ರೇಮಿಗಳ ದಿನವಾದ್ರೂ ಫೆಬ್ರುವರಿ 7 ರಿಂದಲೇ ಪ್ರೇಮಿಗಳ ಹಬ್ಬ ಶುರುವಾಗುತ್ತದೆ. ರೋಸ್‌ ಡೇ (ಫೆಬ್ರುವರಿ 7) ಯಿಂದ ಆರಂಭವಾಗಿ ಪ್ರೇಮಿಗಳ ದಿನದವರೆಗೆ ಮುಂದುವರಿಯುತ್ತದೆ. ರೋಸ್‌ ಡೇ ಎಂದರೆ ಮನ ಮೆಚ್ಚಿದ ಸಂಗಾತಿಗೆ ಗುಲಾಬಿ ಹೂ ನೀಡುವ ಮೂಲಕ ಪ್ರೇಮ ನಿವೇದನೆ ಮಾಡಲಾಗುತ್ತದೆ.

ಗುಲಾಬಿ ಹೂಗಳ ಬಣ್ಣಗಳಿಗೆ ಅರ್ಥ ಇರುವಂತೆ ಹೂವಿನ ಸಂಖ್ಯೆಗೂ ವಿವಿಧ ಅರ್ಥಗಳಿವೆ. ಎಷ್ಟು ಹೂ ನೀಡಿದ್ರೆ ಏನು ಅರ್ಥ ಎಂಬುದನ್ನು ನೀವು ತಿಳಿದುಕೊಳ್ಳಲು ಬಯಸಿದರೆ ಮುಂದೆ ಓದಿ. ಸಂಗಾತಿಗೆ ಹೂಗುಚ್ಛ ನೀಡಬೇಕು ಎನ್ನುವ ಆಸೆ ಹೊಂದಿರುವವರೂ ಕೂಡ ಗುಲಾಬಿ ಹೂವಿನ ಸಂಖ್ಯೆಗಳಿಗಿರುವ ನಾನಾರ್ಥಗಳನ್ನು ತಿಳಿದುಕೊಳ್ಳಿ.

ಪ್ರೇಮಿಗಳ ದಿನದಂದು ನೀವು ನಿಮ್ಮ ಸಂಗಾತಿಗೆ ಒಂದು ಗುಲಾಬಿ ಹೂ ನೀಡಿದರೆ ನೀವು ಮೊದಲ ನೋಟದಲ್ಲೇ ಅವರನ್ನು ಪ್ರೀತಿಸುತ್ತಿದ್ದೀರಿ ಎಂದರ್ಥ. ಅಲ್ಲದೇ ನೀವು ಅವರೊಂದಿಗೆ ಸಂಬಂಧ ಮುಂದುವರಿಸಲು ಬಯಸುತ್ತಿದ್ದೀರಿ ಎಂದರ್ಥ.

ಇಬ್ಬರು ವ್ಯಕ್ತಿಗಳು ಪರಸ...