Bengaluru, ಫೆಬ್ರವರಿ 23 -- ಐಷಾರಾಮಿ ರೋಲ್ಸ್ ರಾಯ್ಸ್ ಎಲೆಕ್ಟ್ರಿಕ್ ಕಾರ್‌ನಲ್ಲಿ ಬಂದಿದೆ ಹೊಸ ಬ್ಲ್ಯಾಕ್ ಬ್ಯಾಡ್ಜ್ ಎಡಿಷನ್ರೋಲ್ಸ್ ರಾಯ್ಸ್ ಬ್ಲ್ಯಾಕ್ ಬ್ಯಾಡ್ಜ್ ಸ್ಪೆಕ್ಟರ್ ಐಷಾರಾಮಿ ಇವಿಯ ನೂತನ ಆವೃತ್ತಿ ಜಾಗತಿಕವಾಗಿ ಅನಾವರಣಗೊಂಡಿದೆ. ಇದು ಬೋಲ್ಡ್ ವಿನ್ಯಾಸ, ಐಷಾರಾಮಿ ಕ್ಯಾಬಿನ್ ಮತ್ತು ವಿಸ್ತೃತ ಕಸ್ಟಮೈಸ್ ಆಯ್ಕೆಗಳನ್ನು ಹೊಂದಿದೆ.

ಎಲೆಕ್ಟ್ರಿಕ್ ಸೂಪರ್-ಕೂಪೆ ವೇಪರ್ ವೈಲೆಟ್ ಹೊರಭಾಗವನ್ನು ಹೊಂದಿದೆ ಮತ್ತು ಐಚ್ಛಿಕ ಐಸ್ ಬ್ಲ್ಯಾಕ್ ಬಾನೆಟ್ ನೊಂದಿಗೆ ನೀಡಲಾಗುತ್ತದೆ. ಜತೆಗೆ ಡಾರ್ಕ್-ಫಿನಿಶ್ಡ್ ಗ್ರಿಲ್ ಮತ್ತು ಸಾಂಪ್ರದಾಯಿಕ ಸ್ಪಿರಿಟ್ ಆಫ್ ಎಕ್ಸ್ಟಸಿಯೊಂದಿಗೆ ಬಿಡುಗಡೆಯಾಗಿದೆ.

ಬ್ಲ್ಯಾಕ್ ಬ್ಯಾಡ್ಜ್ ಸ್ಪೆಕ್ಟರ್ ಅನ್ನು ನಿಮ್ಮ ಇಚ್ಛೆಯಂತೆ ಕಾನ್ಫಿಗರ್ ಮಾಡುವಾಗ, ಖರೀದಿದಾರರು ಲಭ್ಯವಿರುವ 44,000 ಬಣ್ಣಗಳಿಂದ ಆಯ್ಕೆ ಮಾಡಬಹುದು ಅಥವಾ ಅವರ ವೈಯಕ್ತಿಕ ಆದ್ಯತೆಗಳಿಗೆ ಅನುಗುಣವಾಗಿ ಕಸ್ಟಮ್ ಶೇಡ್ ಅನ್ನು ಸಹ ಬಳಸಿ, ಆರ್ಡರ್ ನೀಡಬಹುದು.

ಹೊಸ ಆವೃತ್ತಿಯೊಂದಿಗೆ, ರೋಲ್ಸ್ ರಾಯ್ಸ್ 23-ಇಂಚಿನ ಐದು-ಸ್ಪೋಕ್ ಅ...