ಭಾರತ, ಮಾರ್ಚ್ 11 -- ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾ ಗೆಲುವಿನ ನಂತರ ನಾಯಕ ರೋಹಿತ್​ ಶರ್ಮಾ ತಂಡದ ಯಶಸ್ಸು ಮತ್ತು ತನ್ನ ಭವಿಷ್ಯದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. 2027ರ ಏಕದಿನ ವಿಶ್ವಕಪ್ ಆಡುತ್ತಾರೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಇದೇ ವೇಳೆ ಜಸ್ಪ್ರೀತ್ ಬುಮ್ರಾ ಅಲಭ್ಯತೆಯಲ್ಲಿ ಭಾರತ ತಂಡ ಯೋಜನೆಗಳು, 2015ರ ಏಕದಿನ ವಿಶ್ವಕಪ್ ಸೋಲಿನ ನಂತರ ತಂಡದಲ್ಲಾದ ಬದಲಾವಣೆ ಕುರಿತು ವಿವರಿಸಿದ್ದಾರೆ. ರೋಹಿತ್ ತಮ್ಮ ಗೆಲುವಿನ ಪಯಣದ ಕುರಿತು ಏನೆಲ್ಲಾ ಮಾತನಾಡಿದ್ದಾರೆ ಎಂಬುದರ ವಿವರ ಇಂತಿದೆ.

'ನಾವು 5 ಟಾಸ್‌ಗಳಲ್ಲಿ ಸೋತೆವು, ಆದರೆ ಒಂದೇ ಒಂದು ಪಂದ್ಯವನ್ನು ಕಳೆದುಕೊಳ್ಳದೆ ಚಾಂಪಿಯನ್ಸ್ ಟ್ರೋಫಿ ಗೆದ್ದೆವು. ಯಾವುದೇ ಸರಣಿಯಲ್ಲಿ ಸೋಲಿಲ್ಲದೆ ಕೊನೆಯವರೆಗೆ ಹೋಗುವುದು ದೊಡ್ಡ ಸವಾಲು. ಆದರೆ ನಾವದನ್ನು ಸಾಧಿಸಿದ್ದೇವೆ. ಚಾಂಪಿಯನ್ ಪಟ್ಟ ಗೆದ್ದ ನಂತರವೇ ಇದರ ವಿಶಿಷ್ಟತೆ ಅರಿತೆವು. ಇದನ್ನು ಪದಗಳಲ್ಲಿ ವಿವರಿಸುವುದು ತುಂಬಾ ಕಷ್ಟ. ನಾವು ಪೂರ್ಣ ಪ್ರತಿಬದ್ಧತೆ ಮತ್ತು ಒಗ್ಗಟ್ಟಿನ ತಂಡ...