Bangalore, ಮಾರ್ಚ್ 19 -- Rishab Shetty Movie: ಕಾಂತಾರ ಚಾಪ್ಟರ್‌ 1ರಿಂದ ಜೈ ಹನುಮಾನ್‌ ತನಕ ರಿಷಬ್‌ ಶೆಟ್ಟಿ ನಟನೆಯ ಹಲವು ಸಿನಿಮಾಗಳು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದೆ. ಇವುಗಳಲ್ಲಿ ಕಾಂತಾರ ಚಾಪ್ಟರ್‌ 1 ಸಿನಿಮಾವು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡಮಟ್ಟದಲ್ಲಿ ಕೊಳ್ಳೆ ಹೊಡೆಯುವ ಯೋಜನೆಯಲ್ಲಿದೆ. ಇದೇ ಸಮಯದಲ್ಲಿ ಹನುಮಾನ್‌ ಸಿನಿಮಾದ ಮುಂದುವರೆದ ಭಾಗ ಜೈ ಹನುಮಾನ್‌ನಲ್ಲಿ ಡಿವೈನ್‌ ಸ್ಟಾರ್‌ ರಿಷಬ್‌ ಶೆಟ್ಟಿ ಹನುಮಂತನ ಪಾತ್ರದಲ್ಲಿ ನಟಿಸಲಿದ್ದಾರೆ. ಇದೇ ರೀತಿ ಛತ್ರಪತಿ ಶಿವಾಜಿಯ ಐತಿಹಾಸಿಕ ಪಾತ್ರದಲ್ಲಿಯೂ ಶೆಟ್ರು ಮಿಂಚಲಿದ್ದಾರೆ. ಸಿನಿಮಾ ನಟರಾಗಿ, ಬರಹಗಾರರಾಗಿ, ನಿರ್ದೇಶಕರಾಗಿ ಖ್ಯಾತಿ ಪಡೆದಿರುವ ಸ್ಯಾಂಡಲ್‌ವುಡ್‌ನ ಹೆಮ್ಮೆಯ ತಾರೆ ರಿಷಬ್‌ ಶೆಟ್ಟಿ ನಟನೆಯ ಬಹುನಿರೀಕ್ಷಿತ ಮುಂಬರುವ ಚಿತ್ರಗಳನ್ನೊಮ್ಮೆ ನೆನಪಿಸಿಕೊಳ್ಳೋಣ.

ರಿಷಬ್‌ ಶೆಟ್ಟಿ ನಟನೆ,‌ ನಿರ್ದೇಶನದ ಬಹುನಿರೀಕ್ಷಿತ ಚಿತ್ರವಿದು. ಮತ್ತೊಮ್ಮೆ ದೈವದ ವೋ ಎಂಬ ಧ್ವನಿ ಕೇಳಲು ಪ್ರೇಕ್ಷಕರು ಕಾತರದಿಂದ ಇದ್ದಾರೆ. ಈ ಸಿನಿಮಾವು 2025ರ ಅಕ್ಟೋಬರ್‌ ...