Bengaluru, ಮಾರ್ಚ್ 4 -- ರಿವೋಲ್ಟ್ ಆರ್ ವಿ ಬ್ಲೇಜ್ ಎಕ್ಸ್ ಎಲೆಕ್ಟ್ರಿಕ್ ಬೈಕಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ. 1.14 ಲಕ್ಷಗಳಾಗಿದೆ. ಇದು ರಿವೋಲ್ಟ್‌ನ ಹೊಸ ಎಲೆಕ್ಟ್ರಿಕ್ ಮೋಟಾರ್ ಸೈಕಲ್ ಆಗಿದೆ. ಇದು ರಿವೋಲ್ಟ್ ಕಂಪನಿಯ ಐದನೇ ಉತ್ಪನ್ನವಾಗಿದೆ ಮತ್ತು ಇದು ಬ್ರಾಂಡ್‌ನ ಪ್ರಮುಖ ಮಾದರಿ ಆರ್ ವಿ 400 ಮತ್ತು ಆರ್ ವಿ 400 ಬಿಆರ್ ಝಡ್ ಮಧ್ಯದ ಆವೃತ್ತಿಯಾಗಿದೆ.

ರಿವೋಲ್ಟ್ ಆರ್ ವಿ ಬ್ಲೇಜ್ ಎಕ್ಸ್ ಬೈಕ್ ವಿವಿಧ ಬ್ರಾಂಡ್‌ಗಳಲ್ಲಿನ ಕಮ್ಯೂಟರ್ ಮೋಟಾರ್ ಸೈಕಲ್ ಮಾದರಿಗೆ ಅನುಗುಣವಾದ ವಿನ್ಯಾಸವನ್ನು ಹೊಂದಿದೆ. ಇದು ವೃತ್ತಾಕಾರದ ಎಲ್ಇಡಿ ಹೆಡ್ ಲ್ಯಾಂಪ್, ಉದ್ದನೆಯ ಸೀಟ್, ಟೇಪರ್ಡ್ ಟೈಲ್ ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್ ಸ್ಟರ್ಲಿಂಗ್ ಸಿಲ್ವರ್ ಬ್ಲ್ಯಾಕ್ ಮತ್ತು ಎಕ್ಲಿಪ್ಸ್ ರೆಡ್ ಬ್ಲ್ಯಾಕ್ ಎಂಬ ಎರಡು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿದೆ.

ರಿವೋಲ್ಟ್ ಆರ್ ವಿ ಬ್ಲೇಜ್ ಎಕ್ಸ್ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಪೂರ್ಣ ಎಲ್ಇಡಿ ಲೈಟಿಂಗ್ ಇದರ ವಿಶೇಷತೆಯಾಗಿದೆ. ಇದು ಇನ್ಸ್ಟ್ರುಮೆಂಟ್ ಕ್ಲಸ್ಟರ್ನಲ್ಲಿ 6...