ಭಾರತ, ಫೆಬ್ರವರಿ 6 -- ಜೀವನದ ಅರ್ಧ ಆಯಸ್ಸನ್ನು ದುಡಿಮೆ, ಸಂಸಾರ, ಮನೆ-ಮಕ್ಕಳು ಎಂದೇ ಕಳೆದು, ತಮ್ಮ ಜೀವನಕ್ಕೆ ಆಧಾರವಾದ ವೃತ್ತಿಯನ್ನು ಬಿಟ್ಟು ಆಚೆ ಬರುವುದಿದೆಯಲ್ಲ ಅದು ಅರಗಲಾರದ ಆಘಾತವೇ ಸರಿ. ವೃತ್ತಿ, ಉದ್ಯಮ ಯಾವುದೇ ಇರಲಿ ನಿವೃತ್ತಿ ಸಮಯ ಹತ್ತಿರ ಬರುತ್ತಿದೆ ಎಂದಾಗ ಮನದಲ್ಲಿ ಹೇಳಲಾರದ ತಳಮಳ ಇರುವುದು ಸಹಜ. ಕೈ ತುಂಬಾ ಹಣ ಇದ್ದರೂ ನಿವೃತ್ತಿ ಬದುಕು ಎನ್ನುವುದು ಒಂದು ರೀತಿ ಆತಂಕ ಹುಟ್ಟಿಸುತ್ತದೆ.

ಹೌದು, ಪ್ರಾಚೀನ ಕಾಲಘಟ್ಟದಲ್ಲಿ ವೃದ್ಧಾಪ್ಯ ಅಥವಾ ನಿವೃತ್ತಿ ಜೀವನಕ್ಕಾಗಿ ಜನರು ಹಾತೊರೆಯುತ್ತಿದ್ದರು. ಜೀವಮಾನವೆಲ್ಲ ತಮ್ಮ ಕುಟುಂಬಕ್ಕಾಗಿ ಮೀಸಲಿಟ್ಟ ಬದುಕನ್ನು ವೃದ್ಧಾಪ್ಯದಲ್ಲಿ ಮಕ್ಕಳು, ಮೊಮ್ಮಕ್ಕಳು, ಸಮಾನವಯಸ್ಕರರೊಂದಿಗೆ ಹರಟೆ ಹೊಡೆಯುತ್ತಾ ಕಾಲ ಕಳೆದರೆ, ಇನ್ನೂ ಕೆಲವರು ಜಮೀನು ಕೆಲಸಗಳಲ್ಲಿ ತೊಡುಗವ ಮೂಲಕ ತಮ್ಮ ವೃದ್ಧಾಪ್ಯವನ್ನು ಕಳೆಯುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಎಲ್ಲವೂ ಬದಲಾಗಿದೆ. ಈಗ ಸಾಮಾಜಿಕವಾಗಿ, ಕೌಟುಂಬಿಕವಾಗಿ ಬೆರೆಯುವುದು ಕಡಿಮೆಯಾಗಿದೆ. ಬದಲಾಗುತ್ತಿರುವ ಸಮಾಜಿಕ ಸ್ಥಿತಿಗ...