Delhi, ಜನವರಿ 26 -- Republic Day 2025: ದೆಹಲಿಯಲ್ಲಿ ಗಣರಾಜ್ಯೋತ್ಸವ ಸಡಗರ, ಚಳಿಯ ನಡುವೆಯೂ ದೇಶಾಭಿಮಾನವನ್ನು ಬಿಂಬಿಸುವ ಮೆರವಣಿಗೆ. ಸಹಸ್ರಾರು ಮಂದಿ ಖುಷಿಯಿಂದಲೇ ಗಣರಾಜ್ಯೋತ್ಸವದಲ್ಲಿ ಭಾಗಿಯಾದ ಕ್ಷಣ. ಸುಮಾರು ಒಂದೂವರೆ ಗಂಟೆಗಳ ಕಾಲ ಕರ್ತವ್ಯಪಥದಲ್ಲಿ ಭಾರತದ ಕಲೆ, ಸಂಸ್ಕೃತಿ, ಹತ್ತಾರು ಕ್ಷೇತ್ರಗಳಲ್ಲಿನ ಸಾಧನೆಯನ್ನು ಬಿಂಬಿಸುವ ಹಿರಿಮೆಯ ಪ್ರದರ್ಶನ, ಯೋಧರು, ಕಲಾವಿದರು, ಸಾಧಕರ ಸಮ್ಮಿಲನದ ಖುಷಿಯ ಕ್ಷಣಗಳು, ಇಡೀ ಕರ್ತವ್ಯಪಥವು ಮಿನಿ ಭಾರತವಾಗಿಯೇ ಪರಿವರ್ತನೆಯಾಗಿತ್ತು. ಭಾರತ ಮಾತ್ರವಲ್ಲದೇ ಹೊರ ದೇಶಗಳಿಂದಲೂ ಆಗಮಿಸಿರುವ ಗಣ್ಯರು ಈ ಬಾರಿಯ 76ನೇ ವರ್ಷದ ಗಣರಾಜ್ಯೋತ್ಸವವನ್ನು ಸಾಕ್ಷೀಕರಿಸಿದರು. ಅದರಲ್ಲೂ ಇಂಡೋನೇಷ್ಯಾದ ಅಧ್ಯಕ್ಷರು ಹಾಗೂ ಅವರ ತಂಡ ವಿಶೇಷ ಅತಿಥಿಯಾಗಿದ್ದಾರೆ. ಗಣರಾಜೋತ್ಸವ ಪರೇಡ್‌ ಬೆಳಿಗ್ಗೆಯೇ ಆರಂಭವಾಗಿದ್ದು, ಸುಮಾರು 90 ನಿಮಿಷಗಳ ಕಾಲ ಮೆರವಣಿಗೆ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಗೌರವ ಸಲ್ಲಿಸುವುದರೊಂದಿಗೆ ಸಮಾರಂಭವು ಪ್ರಾರಂಭವಾಯಿತು...