Balehonnur, ಮಾರ್ಚ್ 10 -- ಬಾಳೆಹೊನ್ನೂರು ಧರ್ಮಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ಮಹಾರಥೋತ್ಸವದ ಅಂಗವಾಗಿ ಪ್ರಥಮ ದಿನ ಧರ್ಮ ಧ್ವಜಾರೋಹಣ ನೆರವೇರಿಸಲಾಯಿತು,

ಆಂಧ್ರಪ್ರದೇಶದ ಕೊಲ್ಲಿಪಾಕಿಯಲ್ಲಿರುವ ಸೋಮೇಶ್ವರ ಲಿಂಗದಿಂದ ಹೊರಹೊಮ್ಮಿದ ಶ್ರೀ ಜಗದ್ಗುರು ರೇಣುಕಾಚಾರ್ಯರು ಕರ್ನಾಟಕದಲ್ಲಿ ರಂಭಾಪುರಿ ಪೀಠವನ್ನು ಸ್ಥಾಪಿಸಿದರು ಮತ್ತು ಇದು ವೀರಶೈವ ಧರ್ಮದ ಪಂಚ ಮಹಾಪೀಠಗಳಲ್ಲಿ ಮೊದಲನೆಯದು.

ರಂಭಾಪುರಿ ಪೀಠವು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿದೆ. ಇಲ್ಲಿ ರೇಣುಕಾಚಾರ್ಯರ ಯುಗಮಾನೋತ್ಸವ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಖ್ಯಾತಿ ಪಡೆದಿದೆ.

ರಂಭಾಪುರಿ ಮಠದ ಮುಖ್ಯಸ್ಥರಾದ ಶ್ರೀ ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ನಾನಾ ಪೂಜಾ ವಿಧಿ ವಿಧಾನಗಳು ಐದು ದಿನಗಳ ಕಾಲ ಕಾರ್ಯಕ್ರಮಗಳು ಜರುಗಲಿವೆ.

ಮಂಗಳವಾರ ವೀರಭದ್ರೇಶ್ವರ ಚಿಕ್ಕ ರಥೋತ್ಸವ, ಬುಧವಾರ ಯುಗಮಾನೋತ್ಸವ ಹಾಗೂ ವೀರಭದ್ರೇಶ್ವರ ಸ್ವಾಮಿ ರಥ...