Bengaluru, ಮಾರ್ಚ್ 11 -- ಪ್ರಸಿದ್ಧ ಕಾರು ತಯಾರಿಕ ಕಂಪನಿ ರೆನಾಲ್ಟ್ ಮತ್ತೊಮ್ಮೆ ದೇಶದ ರಸ್ತೆಗೆ ಹೊಸ ಆವೃತ್ತಿಯನ್ನು ಪರಿಚಯಿಸಲು ಮುಂದಾಗಿದೆ. ರೆನಾಲ್ಟ್ ಕಿಗರ್ ಫೇಸ್ ಲಿಫ್ಟ್ ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ರೆನಾಲ್ಟ್‌ನ ಈ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯ ಜಂಟಿ ಸಹಯೋಗದ ಮತ್ತೊಂದು ಕಂಪನಿ ನಿಸ್ಸಾನ್ ಮ್ಯಾಗ್ನೈಟ್ ಸಹ ಅಕ್ಟೋಬರ್ 2024ರಲ್ಲಿ ಫೇಸ್‌ಲಿಫ್ಟ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು. ಅದೇ ರೀತಿಯಲ್ಲಿ ರೆನಾಲ್ಟ್ ಕೂಡ ಇತ್ತೀಚೆಗೆ ತನ್ನ ಕಿಗರ್ ಶ್ರೇಣಿಯನ್ನು ಹೊಸ ವೈಶಿಷ್ಟ್ಯಗಳೊಂದಿಗೆ ನವೀಕರಿಸಿದ್ದು, ಕಿಗರ್ ಫೇಸ್ ಲಿಫ್ಟ್ ಆವೃತ್ತಿಯನ್ನು 2025 ರ ನಂತರ ಮಾರುಕಟ್ಟೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ನಿಸ್ಸಾನ್ ಮ್ಯಾಗ್ನೈಟ್ ಫೇಸ್‌ಲಿಫ್ಟ್‌ನಂತೆಯೇ, ನೂತನ ರೆನಾಲ್ಟ್ ಕಿಗರ್ ಫೇಸ್‌ಲಿಫ್ಟ್ ಪ್ರಸ್ತುತ ಕಿಗರ್‌ನಂತೆಯೇ ಹಿಂದಿನ ಛಾಯೆಯನ್ನು ಉಳಿಸಿಕೊಳ್ಳುವ ನಿರೀಕ್ಷೆಯಿದೆ. ಆದಾಗ್ಯೂ, ಕಿಗರ್ ಫೇಸ್‌ಲಿಫ್ಟ್ ಆವೃತ್ತಿ ತೆಳುವಾದ, ಸಮತಲವಾಗಿ ಹೊಂದಿಸಲಾದ ಎಲ್ಇಡಿ ಡೇ ಲ್ಯಾಂಪ್‌, ...