ಭಾರತ, ಮಾರ್ಚ್ 21 -- Relationship Tips: ಹಿಂದೆಲ್ಲಾ ಮದುವೆ, ಪ್ರೀತಿ ಈ ರೀತಿಯ ಸಂಬಂಧಗಳಲ್ಲಿ ಗಂಡಿನ ಮಾತೇ ಹೆಚ್ಚು ನಡೆಯುತ್ತಿತ್ತು. ಅಂದರೆ ಗಂಡ ಹೇಳಿದ್ದನ್ನು ಹೆಂಡತಿ ಕೇಳಬೇಕಿತ್ತು, ಕೇಳುತ್ತಿದ್ದಳು ಕೂಡ. ಪುರುಷ ಪ್ರಧಾನ ಸಮಾಜದಲ್ಲಿ ಸಂಬಂಧದಲ್ಲೂ ಪುರುಷನ ಮಾತೇ ನಡೆಯಬೇಕಿತ್ತು, ನಡೆಯುತಿತ್ತು. ಸಾಂಪ್ರದಾಯಿಕವಾಗಿಯೂ ಗಂಡೇ ಸಂಬಂಧದ ಮುಂದಾಳತ್ವ ವಹಿಸಿಕೊಳ್ಳಬೇಕಿತ್ತು. ಆದರೆ ಈಗ ಕಾಲ ಬದಲಾಗಿದೆ, ಅದರೊಂದಿಗೆ ಸಂಬಂಧದಲ್ಲಿ ಗಂಡು ಮೇಲು ಎನ್ನುವ ಮನೋಭಾವವೂ ಬದಲಾಗಿದೆ.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುತ್ತಿದ್ದಾರೆ, ವೃತ್ತಿಜೀವನದಲ್ಲೂ ಸಾಕಷ್ಟು ಯಶಸ್ಸು ಗಳಿಸುತ್ತಿದ್ದಾರೆ. ಹೆಣ್ಣುಮಕ್ಕಳಲ್ಲಿ ಆತ್ಮವಿಶ್ವಾಸವೂ ಹೆಚ್ಚಿದೆ. ಈ ಎಲ್ಲ ಅಂಶಗಳೊಂದಿಗೆ ಸಂಬಂಧದಲ್ಲಿನ ಅಧಿಕಾರದ ಹೊಣೆಗಾರಿಕೆಯೂ ಬದಲಾಗಿದೆ ಎನ್ನುವುದು ಹಲವರ ವಾದ, ಅಂದರೆ ಸಂಬಂಧವನ್ನು ಹೆಣ್ಣುಮಕ್ಕಳೇ ಹೆಚ್ಚು ನಿಯಂತ್ರಣ ಮಾಡುತ್ತಿದ್ದಾರೆ ಎಂಬುದು ಅವರ ಅಭಿಪ್ರಾಯ. ಇದನ್ನು ಹಲವರು ನಿಜ ಎನ್ನುತ್ತಿದ್ದಾರೆ. ಹಾಗಾದ...