ಭಾರತ, ಮಾರ್ಚ್ 12 -- ಗಂಡ-ಹೆಂಡತಿ ಸಂಬಂಧ ಎಂಬುದು ನಿಂತಿರುವುದು ನಂಬಿಕೆಯ ಮೇಲೆ. ಪತಿ-ಪತ್ನಿ ಯಾವುದೇ ವಿಚಾರವನ್ನು ಒಬ್ಬರಿಂದೊಬ್ಬರು ಮುಚ್ಚಿಡಬಾರದು. ಎಲ್ಲವನ್ನೂ ಹೇಳಿಕೊಂಡು, ಹಂಚಿಕೊಂಡಾಗ ಮಾತ್ರ ಸಂಸಾರ ಸುಸೂತ್ರವಾಗಿ ಸಾಗಲು ಸಾಧ್ಯ. ಹೆಂಡತಿಯಾದವಳು ಸಾಮಾನ್ಯವಾಗಿ ಗಂಡನಿಂದ ಯಾವುದೇ ವಿಚಾರವನ್ನು ಮುಚ್ಚಿಡುವುದಿಲ್ಲ. ಆದರೆ ಗಂಡನಾದವನು ತನ್ನ ಹೆಂಡತಿಯಿಂದ ಕೆಲವು ವಿಚಾರಗಳನ್ನು ಖಂಡಿತವಾಗಿಯೂ ಮುಚ್ಚಿಡುತ್ತಾನೆ.

ಕೆಲವು ವಿಚಾರಗಳನ್ನು ಗಂಡು-ಹೆಂಡತಿ ನಡುವಿನ ಸಂಬಂಧವನ್ನು ಕೆಡಿಸಬಹುದು. ಇದರಿಂದ ಅವರ ನಡುವೆ ಬಾಂಧವ್ಯ, ಪ್ರೀತಿ ಕಡಿಮೆಯಾಗಬಹುದು. ಆದರೆ ಗಂಡ ಯಾವೆಲ್ಲಾ ವಿಚಾರವನ್ನು ಹೆಂಡತಿಯಿಂದ ಮುಚ್ಚಿಡುತ್ತಾನೆ, ಯಾವ ಕಾರಣಕ್ಕೆ ಮುಚ್ಚಿಡುತ್ತಾನೆ ಎನ್ನುವ ವಿವರ ಇಲ್ಲಿದೆ.

ಗಂಡನಾದವನು ಹೆಚ್ಚಾಗಿ ತನ್ನ ನೋವು ಹಾಗೂ ದುಃಖದ ಭಾವನೆಗಳನ್ನು ಹೆಂಡತಿಯಿಂದ ಮರೆ ಮಾಚುತ್ತಾನೆ. ಇದಕ್ಕೆ ಸಮಾಜವೂ ಒಂದು ಕಾರಣ. ಏಕೆಂದರೆ ಹಿಂದಿನಿಂದಲೂ ನಮ್ಮ ಸಮಾಜದಲ್ಲಿ ಪುರುಷರು ಬಲಿಷ್ಠರು, ಅವರು ಹೆಣ್ಣುಮಕ್ಕಳಂತೆ ಅಳುಮಂಜಿಯರಲ್ಲ ಎನ್...