Bengaluru, ಫೆಬ್ರವರಿ 25 -- ಮದುವೆ ಎಂದರೆ ಅದು ದೊಡ್ಡ ಒಂದು ಜವಾಬ್ದಾರಿ ಮಾತ್ರವಲ್ಲ, ಬಹಳಷ್ಟು ಹೊಂದಾಣಿಕೆ, ಭಿನ್ನತೆಗಳು ಇರುವುದು ಸಹಜ. ಎರಡು ಕುಟುಂಬಗಳ ಬಗ್ಗೆ ಹಲವು ರೀತಿಯ ಆಚರಣೆ, ಮಾತು, ವ್ಯತ್ಯಾಸ ಹೀಗೆ ಹಲವು ಭಿನ್ನತೆಗಳು ಕಂಡುಬರುತ್ತವೆ. ಹೀಗೆ ಹಲವು ರೀತಿಯಲ್ಲಿ ಪರಸ್ಪರ ಅಭಿಪ್ರಾಯ ಬೇಧಗಳು ಕೂಡ ಇರುತ್ತವೆ. ಹಾಗಿರುವಾಗ ಮದುವೆಗೂ ಮೊದಲು ಎರಡೂ ಕುಟುಂಬಗಳ ವಿಭಿನ್ನತೆ ಬಗ್ಗೆ ಮೊದಲೇ ಚರ್ಚಿಸಿ, ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ಮುಂದೆ ಕೆಲವೊಂದು ಸಮಸ್ಯೆಗಳು ಬರಬಹುದು. ಅದರಿಂದ ಮದುವೆಗೂ ತೊಂದರೆಯಾಗಬಹುದು. ಹೀಗಾಗಿ ಮದುವೆಯಾಗುವ ಮೊದಲು, ನಿಮ್ಮ ಸಂಗಾತಿಯೊಂದಿಗೆ ಮುಕ್ತ ಮತ್ತು ಪ್ರಾಮಾಣಿಕ ಚರ್ಚೆಗಳನ್ನು ನಡೆಸುವುದು ನಿಮ್ಮ ಭವಿಷ್ಯಕ್ಕೆ ಬಲವಾದ ಅಡಿಪಾಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ. ಹಾಗಾದರೆ ಮದುವೆಗೂ ಮುನ್ನ ನೀವು ಯಾವೆಲ್ಲಾ ವಿಷಯಗಳನ್ನು ನಿಮ್ಮ ಸಂಗಾತಿ ಜೊತೆಗೆ ಮಾತನಾಡಬೇಕು. ಇಲ್ಲಿವೆ 10 ಪ್ರಮುಖ ವಿಷಯಗಳು.

ನೀವಿಬ್ಬರೂ ಬಜೆಟ್, ಖರ್ಚು, ಉಳಿತಾಯ ಮತ್ತು ಸಾಲವನ್ನು ಹೇಗೆ ನಿರ್ವಹಿಸುತ...