ಭಾರತ, ಮಾರ್ಚ್ 10 -- Rekhachithram Movie Review: ಮಲಯಾಳಿಗಳಿಗೆ ಕ್ರೈಂ ಥ್ರಿಲ್ಲರ್‌, ಮರ್ಡರ್‌ ಮಿಸ್ಟರ್‌ ಸಿನಿಮಾಗಳೆಂದರೆ ಅದೆನೋ ಪ್ರೀತಿ. ರೋಚಕತೆಯ ಕಾಲಿಗೆ ಚಕ್ರ ಕಟ್ಟಿ, ನೋಡುಗನನ್ನು ಬೇರೆಯದೇ ಅಂಚಿಗೆ ಕರೆದೊಯ್ಯುತ್ತಾರೆ ಅಲ್ಲಿನ ಮೇಕರ್‌ಗಳು. ಸರಳ ಕಥೆಗೆ, ಕೌತುಕ ಭರಿತ ಚಿತ್ರಕಥೆ, ಹತ್ತಾರು ಟ್ವಿಸ್ಟ್‌ ಮೂಲಕ ಪ್ರೇಕ್ಷಕನನ್ನು ಸೀಟಿನ ತುದಿಗೆ ತಂದು ಕೂರಿಸಿದ ಸಾಕಷ್ಟು ಸಿನಿಮಾಗಳು, ಮಾಲಿವುಡ್‌ನಲ್ಲಿ ಕಾಣಸಿಗುತ್ತವೆ. ಆ ಪೈಕಿ, ಇದೇ ವರ್ಷದ ಜನವರಿಯಲ್ಲಿ ಬಿಡುಗಡೆ ಆಗಿ, ಸೂಪರ್‌ ಹಿಟ್‌ ಪಟ್ಟ ಪಡೆದ ರೇಖಾಚಿತ್ರಂ ಅನ್ನೋ ಸಿನಿಮಾ, ಇದೀಗ ಒಟಿಟಿಯಲ್ಲಿಯೂ ಟ್ರೆಂಡಿಂಗ್‌ನಲ್ಲಿದೆ. ಭಾಷೆಯ ಗಡಿದಾಟಿ ಹೆಚ್ಚೆಚ್ಚು ವೀಕ್ಷಕರನ್ನು ಸೆಳೆಯುತ್ತಿದೆ ಈ ಸಿನಿಮಾ.

ರಕ್ತಪಾತದ ಗೀಳಿಗೆ ಬೀಳದ ಮಲಯಾಳಿಗಳು, ಕಮರ್ಷಿಯಲ್‌ ಕೋನದಲ್ಲಿಯೂ ಸಿನಿಮಾವನ್ನು ವೈಭವೀಕರಿಸುವುದಿಲ್ಲ. ಹೀರೋಯಿಸಂ, ಅಬ್ಬರದ ಹೊಡೆದಾಟ, ಐಟಂ ಡಾನ್ಸ್‌ ಮೋಹ, ಬೇಕು ಅಂತಲೇ ತುರುಕುವ ಕಾಮಿಡಿ ಇವರ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಲ್ಲ. ಇವರಲ್ಲಿ ಕಥೆಯೇ ನಾಯಕ....