Bengaluru, ಫೆಬ್ರವರಿ 15 -- Rekhachithram OTT: ಮಲಯಾಳಂ ಮಿಸ್ಟರಿ ಥ್ರಿಲ್ಲರ್ ರೇಖಾಚಿತ್ರಂ ಸಿನಿಮಾ ಒಟಿಟಿ ಬಿಡುಗಡೆ ಮತ್ತಷ್ಟು ವಿಳಂಬವಾಗಲಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಫೆಬ್ರವರಿಯಲ್ಲಿಯೇ ಒಟಿಟಿಗೆ ಬರುವ ಸಾಧ್ಯತೆಯಿದೆ ಎಂಬ ವದಂತಿ ಇತ್ತು. ಆದಾಗ್ಯೂ, ಒಟಿಟಿ ವೀಕ್ಷಕರಿಗೆ ಚಿತ್ರದ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಹೀಗಿರುವಾಗಲೇ ಈಗ ಇದೇ ಸಿನಿಮಾದ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆ ಆಗಿದೆ.

ಯಾವಾಗಿನಿಂದ ಸ್ಟ್ರೀಮಿಂಗ್: ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ರೇಖಾಚಿತ್ರಂ ಸಿನಿಮಾ ಮಾರ್ಚ್‌ 14ರಂದು ಸೋನಿಲೈವ್‌ ಒಟಿಟಿಯಲ್ಲಿ ಪ್ರಸಾರ ಆರಂಭಿಸಲಿದೆ ಎಂದು ಹೇಳಲಾಗಿತ್ತು. ಆದರೆ, ಇದೀಗ ಈ ಬಗ್ಗೆ ಸೋನಿ ಲೈವ್‌ ಒಟಿಟಿಯಿಂದ ಅಧಿಕೃತ ಘೋಷಣೆ ಹೊರಬಿದ್ದಿದೆ. ಅಂದರೆ, ಮಾರ್ಚ್‌ 7ರಂದು ರೇಖಾಚಿತ್ರಂ ಸಿನಿಮಾ ಸೋನಿ ಲೈವ್‌ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆರಂಭಿಸಿಲಿದೆ. ಮೂಲ ಮಲಯಾಳಂನಲ್ಲಿನ ಈ ಚಿತ್ರ ಕನ್ನಡ, ತೆಲುಗು, ಹಿಂದಿ ಮತ್ತು ತಮಿಳಿನಲ್ಲಿ ವೀಕ್ಷಣೆಗೆ...