ಭಾರತ, ಮಾರ್ಚ್ 7 -- ಎಂಟನೇ ವಾರದ ಟಿಆರ್‌ಪಿ ರೇಟಿಂಗ್ಸ್‌ನಲ್ಲಿ ಯಾವೆಲ್ಲ ರಿಯಾಲಿಟಿ ಶೋಗಳು ಟಾಪ್‌ನಲ್ಲಿವೆ? ಅತಿ ಹೆಚ್ಚು ಟಿಆರ್‌ಪಿ ಗಿಟ್ಟಿಸಿಕೊಂಡ ಶೋ ಯಾವುದು, ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಶೋನ ಓಪನಿಂಗ್‌ ಏಪಿಸೋಡ್‌ಗೆ ಸಿಕ್ಕ ಟಿಆರ್‌ಪಿ ಎಷ್ಟು? ಇಲ್ಲಿದೆ ವಿವರ.

ಜೀ ಕನ್ನಡದಲ್ಲಿ ನಾನ್‌ ಫಿಕ್ಷನ್‌ ಕಿಂಗ್‌ ಎಂಬ ಪಟ್ಟ ಪಡೆದುಕೊಂಡಿದೆ ಸರಿಗಮಪ ಸಿಂಗಿಂಗ್‌ ರಿಯಾಲಿಟಿ ಶೋ.

ತ್ರಿವಳಿ ರತ್ನಗಳಾದ ಅರ್ಜುನ್‌ ಜನ್ಯ, ರಾಜೇಶ್‌ ಕೃಷ್ಣನ್‌, ವಿಜಯ್‌ ಪ್ರಕಾಶ್‌ ಈ ಶೋನ ತೀರ್ಪುಗಾರರು.

ಆಂಕರ್‌ ಅನುಶ್ರೀ ಅವರ ಪಟಾಕಿ ಮಾತುಗಳ ಮೂಲಕವೇ ಈ ಶೋ ಟಿಆರ್‌ಪಿಯಲ್ಲಿಯೂ ಮುಂದಿದೆ. ಅದರಂತೆ ಎಂಟನೇ ವಾರದ ಟಿಆರ್‌ಪಿಯಲ್ಲಿ ಈ ಶೋ ನಗರ ಮತ್ತು ಗ್ರಾಮೀಣ ಸೇರಿ ಒಟ್ಟು 7.8 ಟಿಆರ್‌ಪಿ ದಾಖಲಿಸಿದೆ.

ಇನ್ನು ಕಲರ್ಸ್‌ ಕನ್ನಡ ಮಜಾ ಟಾಕೀಸ್‌ ಮತ್ತು ಬಾಯ್ಸ್‌ ವರ್ಸಸ್‌ ಗರ್ಲ್ಸ್‌ ಶೋ ಮಹಾಮಿಲನ ಸಂಚಿಕೆಯನ್ನು ವೀಕ್ಷಕರ ಮುಂದಿಟ್ಟಿತ್ತು.

ಕಿರುತೆರೆ ವೀಕ್ಷಕರಿಗೆ ಮಹಾ ಮನರಂಜನೆ ನೀಡುವ ಸಲುವಾಗಿ ಮಜಾ ಟಾಕೀಸ್‌ ಮತ್ತು ಬಾಯ್ಸ್‌ ವರ್ಸಸ್...