ಭಾರತ, ಫೆಬ್ರವರಿ 9 -- ಮೊಟ್ಟೆ ಪೋಷಕಾಂಶಗಳ ಆಗರವಾಗಿದೆ. ಚಿಕ್ಕ ಮಕ್ಕಳಿಂದ ದೊಡ್ಡವವರೆಗೂ ಪ್ರತಿದಿನ ಇದನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಪ್ರಪಂಚದಾದ್ಯಂತ ಮೊಟ್ಟೆಯು ಪ್ರಮುಖ ಆಹಾರದ ಭಾಗವಾಗಿದೆ. ವೈದ್ಯರು ಕೂಡ ನಿಯಮಿತವಾಗಿ ಮೊಟ್ಟೆ ತಿನ್ನಲು ಶಿಫಾರಸು ಮಾಡುತ್ತಾರೆ. ಆದರೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ನಕಲಿ ಮೊಟ್ಟೆಗಳ ಹಾವಳಿ ಜೋರಾಗಿದೆ.

ನಕಲಿ ಮೊಟ್ಟೆಯು ಆರೋಗ್ಯದ ಅಪಾಯವನ್ನು ಹೆಚ್ಚಿಸುವುದು ಮಾತ್ರವಲ್ಲ, ಇದರಿಂದ ಗ್ರಾಹಕರ ನಂಬಿಕೆಗೂ ಮೋಸವಾಗುತ್ತದೆ. ನೀವು ಸುರಕ್ಷಿತ ಆಹಾರವನ್ನು ಸೇವಿಸುತ್ತಿದ್ದೀರಿ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಅಸಲಿ ಹಾಗೂ ನಕಲಿ ಮೊಟ್ಟೆಗಳ ನಡುವಿನ ವ್ಯತ್ಯಾಸ ತಿಳಿಯುವುದು ಬಹಳ ಮುಖ್ಯ. ಹಾಗಾದರೆ ಅಸಲಿ ಮತ್ತು ನಕಲಿ ಮೊಟ್ಟೆಯನ್ನು ಕಂಡುಹಿಡಿಯುವುದು ಹೇಗೆ ನೋಡಿ.

ನೈಜ ಮೊಟ್ಟೆಗಳ ನೋಟ ಮತ್ತು ವಿನ್ಯಾಸವನ್ನು ಅನುಕರಿಸಲು ನಕಲಿ ಮೊಟ್ಟೆಗಳನ್ನು ಕೃತಕವಾಗಿ ತಯಾರಿಸಲಾಗುತ್ತದೆ. ಅವುಗಳನ್ನು ಸಾಮಾನ್ಯವಾಗಿ ರಾಸಾಯನಿಕಗಳು ಮತ್ತು ಜೆಲಾಟಿನ್, ಕೃತಕ ಬಣ್ಣಗಳು ಮತ್ತು ಹೆಪ್ಪುಗಟ...