ಭಾರತ, ಡಿಸೆಂಬರ್ 9 -- ನಿರ್ದಿಷ್ಟ ಮಧ್ಯಂತರಗಳಲ್ಲಿ ಸಾಲದಾತರು ಬ್ಯಾಂಕಿನ ದಾಖಲೆಗಳನ್ನು ನವೀಕರಿಸುವುದಕ್ಕಾಗಿ ಮರು ಕೆವೈಸಿ ಮಾಡುವಂತೆ ಕೇಳುತ್ತಾರೆ. ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾರ್ಗಸೂಚಿಗಳ ಅನುಸಾರವಾಗಿ ಈ ಪ್ರಕ್ರಿಯೆ ನಡೆಯುತ್ತದೆ. ಯಾವುದೇ ವೈಯಕ್ತಿಕ ಅಥವಾ ಸಂಪರ್ಕ ಮಾಹಿತಿಯು ಬದಲಾಗಿದ್ದರೆ, ಗ್ರಾಹಕರು ಮರು-ಕೆವೈಸಿ ಮೂಲಕ ದಾಖಲೆಗಳನ್ನು ನವೀಕರಿಸಬಹುದು.

ಮರು-ಕೆವೈಸಿ ಮಾಡಲು (ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ) ಮಾಡಲು ಬ್ಯಾಂಕ್‌ಗೆ ಭೇಟಿ ನೀಡುವ ಅಗತ್ಯವಿಲ್ಲ. ವಿಳಾಸ ಬದಲಾವಣೆಯ ಸಂದರ್ಭಗಳನ್ನು ಹೊರತುಪಡಿಸಿ ಉಳಿದ ಪ್ರಕ್ರಿಯೆಗಳನ್ನು ಆನ್‌ಲೈನ್‌ನಲ್ಲಿ ಇದನ್ನು ಮಾಡಬಹುದು ಎಂದು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ವಿತ್ತೀಯ ನೀತಿ ಘೋಷಣೆ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಗೆ ಉತ್ತರಿಸುತ್ತ ಈ ವಿಚಾರ ಹೇಳಿದ್ದರು.

ಬ್ಯಾಂಕುಗಳು ಕೂಡ ಗ್ರಾಹಕರನ್ನು ಬ್ಯಾಂಕಿಗೆ ಆಹ್ವಾನಿಸದೇ ಮರು-ಕೆವೈಸಿ ಪ್ರಕ್ರಿಯೆ ಪೂರೈಸುವುದು ಸಾಧ್ಯವಿದೆ. ಒಂದೊಮ್ಮೆ ಬ್ಯಾಂಕುಗಳು ಈ ವಿಚಾರಕ್ಕಾಗಿ ಗ್ರಾಹಕರನ್ನು ಬ್...