ಭಾರತ, ಮಾರ್ಚ್ 16 -- ಪ್ರತಿವರ್ಷದಂತೆ ಈ ಬಾರಿಯೂ ಐಪಿಎಲ್ ಟೂರ್ನಿಯ ಆರಂಭಕ್ಕೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ತವರು ಮೈದಾನದಲ್ಲಿ 'ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌' (RCB Unbox 2025) ವಿಶೇಷ ಕಾರ್ಯಕ್ರಮ ನಡೆಸುತ್ತಿದೆ. ಮಾರ್ಚ್‌ 17ರ ಸೋಮವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣವು ಸತತ ಮೂರನೇ ಬಾರಿಗೆ ಅನ್‌ಬಾಕ್ಸ್ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದೆ. ಈ ಬಾರಿ ರಜತ್‌ ಪಾಟೀದಾರ್‌ ನೇತೃತ್ವದಲ್ಲಿ ಐಪಿಎಲ್‌ನಲ್ಲಿ ಹೊಸತನದೊಂದಿಗೆ ಕಣಕ್ಕಿಳಿಯುತ್ತಿರುವ ತಂಡವು, ಮಾರ್ಚ್ 22ರ ಶನಿವಾರ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಈ ಬಾರಿಯ ಋತುವಿನ ಮೊದಲ ಪಂದ್ಯದಲ್ಲಿ ಆಡಲಿದೆ. ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿರುವ ಪಂದ್ಯಕ್ಕಿಂತ ಕೇವಲ ಐದು ದಿನ ಮುಂಚಿತವಾಗಿ ಅನ್‌ಬಾಕ್ಸ್‌ ಈವೆಂಟ್‌ ನಡೆಯುತ್ತಿದೆ.

ಆರ್‌ಸಿಬಿ ತಂಡವು ಅಭಿಮಾನಿಗಳಿಗಾಗಿ 2022ರಲ್ಲಿ ಅನ್‌ಬಾಕ್ಸ್ ಕಾರ್ಯಕ್ರಮವನ್ನು ಪರಿಚಯಿಸಿತು. ತಂಡದ ಹೊಸ ಜೆರ್ಸಿ ಬಿಡುಗಡೆ ಮಾಡಲು, ಆಟಗಾರರು...