ಭಾರತ, ಮಾರ್ಚ್ 19 -- ಬೆಂಗಳೂರು: ಆರ್‌ಸಿಬಿ ಅಂದ್ರೆ ಅಭಿಮಾನಿಗಳ ಕ್ರೇಜ್‌ ಹಾಗೂ ಜೋಶ್‌ ದುಪ್ಪಟ್ಟು. ಸತತ 17 ಸೀಸನ್‌ಗಳಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಆಡಿದ್ದರೂ, ಇದುವರೆಗೂ ತಂಡ ಒಂದೇ ಒಂದು ಕಪ್‌ ಕೂಡಾ ಗೆದ್ದಿಲ್ಲ. ಆದರೂ, ಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಅಲ್ಲದೆ ಕ್ರೇಜ್‌ ಕೂಡಾ ಸ್ವಲ್ಪವೂ ಕುಂದಿಲ್ಲ. ತಂಡದ ಜನಪ್ರಿಯ ಘೋಷವಾಕ್ಯ 'ಈ ಸಲ ಕಪ್‌ ನಮ್ದೇ' ಅನ್ನೋದನ್ನು ಅಭಿಮಾನಿಗಳು ಆಗಾಗ ಹೇಳುತ್ತಾ ಇರುತ್ತಾರೆ. ತಂಡದ ಆಟಗಾರರು ಕೂಡಾ ಆಗಾಗ ಈ ವಾಕ್ಯವನ್ನು ಹೇಳುತ್ತಾ ಇರುತ್ತಾರೆ. ಆರ್‌ಸಿಬಿ ತಂಡದ ಆಪತ್ಬಾಂಧವನಾಗಿದ್ದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್, ಈ ಸ್ಲೋಗನ್‌ ಕುರಿತಾಗಿ ಅಚ್ಚರಿಯ ಮಾತನ್ನು ಹೇಳಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್‌ ಆಟಗಾರ ವಿರಾಟ್ ಕೊಹ್ಲಿ, ಸಾರ್ವಜನಿಕವಾಗಿ ಎಲ್ಲಿಯೂ ಈ ಘೋಷಣೆಯನ್ನು ಉಚ್ಚರಿಸದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ಎಬಿಡಿ ಹೇಳಿಕೊಂಡಿದ್ದಾರೆ.

ಆರ್‌ಸಿಬಿ ತಂಡಕ್ಕೆ ಅಭಿಮಾನಿಗಳೇ ಬಲ. ತಂಡ ಸೋತರೂ ಗೆದ್ದರೂ ಜೊತೆಗೆ ನಿಲ್ಲುವವರು, ಆಟಗಾರರನ್...