Bengaluru, ಏಪ್ರಿಲ್ 15 -- ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ತನ್ನ 2025ರ ಎಪ್ರಿಲ್ 9ರಂದು ನಡೆದ ದ್ವೈಮಾಸಿಕ ಹಣಕಾಸು ನೀತಿ ಸಭೆಯಲ್ಲಿ, ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಷ್ಟು (0.25%) ಕಡಿಮೆ ಮಾಡಿದ್ದು, ಈಗ ಅದು 6.25%ರಿಂದ 6% ಆಗಿದೆ. ಇದು ಈ ವರ್ಷದ ಎರಡನೇ ನಿರಂತರ ದರ ಇಳಿಕೆ ಆಗಿದ್ದು, ಮೊದಲ ಬಾರಿಗೆ ಫೆಬ್ರವರಿಯಲ್ಲಿ ಇಳಿಕೆ ಮಾಡಲಾಗಿತ್ತು. ಸಾಲದ ಮೇಲಿನ ಬಡ್ಡಿದರವನ್ನು ಬ್ಯಾಂಕ್‌ಗಳು ಈಗಾಗಲೇ ಇಳಿಕೆ ಮಾಡಿವೆ. ಇದರಿಂದ ಗೃಹಸಾಲ, ವಾಹನ ಸಾಲ ಮತ್ತು ಆಸ್ತಿ ಖರೀದಿಗೆ ಸಾಲ ಮಾಡುವವರಿಗೆ ಪ್ರಯೋಜನವಾಗಲಿದೆ. ಆರ್‌ಬಿಐ ರೆಪೋ ದರ ಕಡಿತದ ಪ್ರಯೋಜನವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸುತ್ತಿವೆ, ಇದರಿಂದ ಸಾಲ ಪಡೆಯುವವರಿಗೆ ಬಡ್ಡಿ ದರದ ಹೊರೆ ಕೊಂಚ ಕಡಿಮೆಯಾಗಲಿದೆ.

ರೆಪೊ ದರ ಎಂದರೆ ವಾಣಿಜ್ಯ ಬ್ಯಾಂಕುಗಳು ಆರ್‌ಬಿಐಯಿಂದ ಸಾಲ ಪಡೆಯುವಾಗ ಕಟ್ಟುವ ಬಡ್ಡಿದರ. ಈ ದರ ಕಡಿಮೆಯಾದರೆ, ಬ್ಯಾಂಕುಗಳಿಗೆ ಸಾಲ ಪಡೆಯುವುದು ಸುಲಭವಾಗುತ್ತದೆ ಮತ್ತು ಅದು ಜನತೆಗೆ ಕಡಿಮೆ ಬಡ್ಡಿದರದ ಸಾಲಗಳನ್ನು ನೀಡಲು ಸಾಧ್ಯವ...