ಭಾರತ, ಫೆಬ್ರವರಿ 7 -- ದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ) ಶುಕ್ರವಾರ (ಫೆಬ್ರುವರಿ 7) ಇತರ ಬ್ಯಾಂಕುಗಳಿಗೆ ನೀಡುವ ಸಾಲದ ದರವಾದ ರೆಪೋ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ಶೇ 6.25 ಪ್ರತಿಶತಕ್ಕೆ ಇಳಿಸಿದೆ. ಕಳೆದ 5 ವರ್ಷಗಳಲ್ಲಿ ಇದೇ ಮೊದಲು ಬಾರಿಗೆ ಆರ್‌ಬಿಐ ರೆಪೋ ದರ ಇಳಿಕೆ ಮಾಡಿದೆ. 2020ರ ಮೇಯಲ್ಲಿ ಕೊನೆಯ ಬಾರಿಗೆ ರೆಪೋ ದರ ಕಡಿತಗೊಳಿಸಲಾಗಿತ್ತು.

ಇಲ್ಲಿಯವರೆಗೆ ರೆಪೋ ದರ ಶೇ 6.5 ರಷ್ಟಿತ್ತು. ಕೇಂದ್ರ ಸರ್ಕಾರವು ವೈಯಕ್ತಿಕ ಆದಾಯ ತೆರಿಗೆಯನ್ನು ಕಡಿತಗೊಳಿಸಿದ ಕೇವಲ ಒಂದು ವಾರದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

ಸಾಲವನ್ನು ಅಗ್ಗವಾಗಿಸುವ ಮೂಲಕ ಆರ್ಥಿಕ ಚಟುವಟಿಕೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಖರ್ಚು ಮತ್ತು ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ ಆರ್‌ಬಿಐ ಎಂಪಿಸಿಯ ಎಲ್ಲಾ ಸದಸ್ಯರು ಸರ್ವಾನುಮತದ ನಿರ್ಧಾರದಲ್ಲಿ ರೆಪೊ ದರವನ್ನು ಕಡಿಮೆ ಮಾಡಿತು.

ಈ ನಿರ್ಧಾರವನ್ನು ಪ್ರಕಟಿಸಿದ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, 'ಸಾಂಕ್ರಾಮಿಕ ರೋಗದಿ...