Bengaluru, ಏಪ್ರಿಲ್ 3 -- ಈರುಳ್ಳಿಯಲ್ಲಿ ವಿಟಮಿನ್ ಸಿ ಇದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ ಅಗತ್ಯವಿದೆ.

ಈರುಳ್ಳಿಯಲ್ಲಿ ನೀರಿನ ಅಂಶ ಸ್ವಲ್ಪ ಹೆಚ್ಚಾಗಿದೆ. ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಬೇಸಿಗೆಯಲ್ಲಿ ಮಾತ್ರವಲ್ಲ, ಯಾವುದೇ ಋತುವಿನಲ್ಲಿಯೂ, ದೇಹವು ಹೈಡ್ರೇಟ್ ಆಗಿರಬೇಕು.

ಹಸಿ ಈರುಳ್ಳಿ ದೇಹವನ್ನು ತಂಪಾಗಿಸುತ್ತದೆ. ಬೇಸಿಗೆಯಲ್ಲಿ ದೇಹದ ತಾಪಮಾನವನ್ನು ಕಡಿಮೆ ಮಾಡುವುದು ಅವಶ್ಯಕ.

ಈರುಳ್ಳಿಯಲ್ಲಿ ಸಲ್ಫರ್ ಎಂಬ ಉರಿಯೂತ ನಿವಾರಕ ಅಂಶವಿದೆ. ಇದು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಅನೇಕ ರೋಗಗಳನ್ನು ದೂರವಿರಿಸುತ್ತದೆ.

ಹಸಿ ಈರುಳ್ಳಿಯಲ್ಲಿ ಫೈಬರ್ ಮತ್ತು ಪ್ರಿಬಯಾಟಿಕ್ ಸಮೃದ್ಧವಾಗಿವೆ. ಈರುಳ್ಳಿ ತಿನ್ನುವುದರಿಂದು ಜೀರ್ಣಕ್ರಿಯೆ ಸಮಸ್ಯೆಗಳನ್ನು ದೂರವಿರಿಸುತ್ತದೆ.

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ.

Published by HT Digital Content ...