Bengaluru, ಜನವರಿ 27 -- Ratha Saptami 2025: ಹಿಂದೂ ಧರ್ಮದಲ್ಲಿ ಸೂರ್ಯದೇವನನ್ನು ಆರಾಧಿಸುವ ರಥಸಪ್ತಮಿಗೆ ವಿಶೇಷ ಪ್ರಾಮುಖ್ಯತೆ ಇದೆ. ಈ ದಿನ ಸೂರ್ಯನನ್ನು ಪೂಜಿಸುವುದರಿಂದ ವಿಶೇಷ ಫಲಗಳು ದೊರೆಯುತ್ತವೆ ಎಂಬ ನಂಬಿಕೆ ಇದೆ. ಪ್ರತಿ ವರ್ಷ ಮಾಘ ಮಾಸದ ಶುಕ್ಲಪಕ್ಷದಲ್ಲಿ ಬರುವ ಸಪ್ತಮಿ ದಿನದಂದು ಸೂರ್ಯದೇವನಿಗೆ ಪ್ರತ್ಯೇಕ ಪೂಜೆ ಮಾಡಲಾಗುತ್ತದೆ. ಈ ದಿನ ದಾನ ಧರ್ಮಗಳನ್ನು ಮಾಡಿದರೆ ಮನಸ್ಸಿನ ಆಸೆಗಳೆಲ್ಲಾ ಈಡೇರಲಿವೆ ಎಂಬ ನಂಬಿಕೆ ಇದೆ.

ಹಿಂದೂ ಕ್ಯಾಲೆಂಡರ್‌ ಪ್ರಕಾರ ಈ ಬಾರಿ ಮಾಘ ಮಾಸದ ಶುಕ್ಲಪಕ್ಷದ ಸಪ್ತಮಿ ತಿಥಿ 4 ಫೆಬ್ರವರಿ 2025 ಬೆಳಗ್ಗೆ 7:56 ಗಂಟೆಯಿಂದ ಆರಂಭವಾಗಿ ಮರುದಿನ, ಅಂದರೆ 5 ಫೆಬ್ರವರಿ 2025 ಬೆಳಗ್ಗೆ 5:29ವರೆಗೆ ಇರಲಿದೆ. ಉದಯ ತಿಥಿಯ ಆಧಾರದ ಮೇಲೆ ಜೂನ್‌ 4 ರಂದು ರಥಸಪ್ತಮಿ ಆಚರಿಸಲಾಗುತ್ತಿದೆ.

ಸೂರ್ಯದೇವನು 7 ಕುದುರೆಗಳ ರಥವನ್ನು ಏರಿ ದಕ್ಷಿಣಾಯನವನ್ನು ಮುಗಿಸಿದ ನಂತರ ಪೂರ್ವಕ್ಕೆ ಪ್ರಯಾಣಿಸುತ್ತಾನೆ. ರಥ ಸಪ್ತಮಿ ಎಂದರೆ ಸೂರ್ಯ ಜನಿಸಿದ ದಿನವಲ್ಲ, ಇಂದಿನಿಂದ ಸೂರ್ಯನ ರಥಯಾತ್ರೆ ಆರಂಭವಾಗುತ್ತ...