ಭಾರತ, ಏಪ್ರಿಲ್ 5 -- Rashmika Mandanna Birthday: ರಶ್ಮಿಕಾ ಮಂದಣ್ಣ ನಟಿಸಿರುವ ಬಾಲಿವುಡ್ ಸಿನಿಮಾಗಳಲ್ಲಿ ಅನಿಮಲ್‌ ದೊಡ್ಡಮಟ್ಟದ ಯಶಸ್ಸು ಪಡೆದಿದೆ. ಆದರೆ, ಅವರು ನಟಿಸಿದ ಕೆಲವು ಸಿನಿಮಾಗಳು ಸಾಧಾರಣ ಕಲೆಕ್ಷನ್‌ ಮಾಡಿವೆ. ಇವರು ಕೆಲವೊಂದು ಸಿನಿಮಾಗಳ ಆಫರ್‌ಗಳನ್ನು ನಿರಾಕರಿಸಿದ್ದಾರೆ.

ತೆಲುಗು ಮತ್ತು ಬಾಲಿವುಡ್‌ನಲ್ಲಿ ಹಲವು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ನಟಿಸುತ್ತಿದ್ದಾರೆ. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ಅವರು ಕೆಲವು ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ. ಆದರೆ ಆಕೆ ತಿರಸ್ಕರಿಸಿದ ಸಿನಿಮಾಗಳು ಎಲ್ಲವೂ ಫ್ಲಾಪ್ ಆಗಿರುವುದು ಗಮನಾರ್ಹ.

ಇತ್ತೀಚೆಗೆ ಬಿಡುಗಡೆಯಾದ ರಾಬಿನ್ ಹುಡ್ ಸಿನಿಮಾದಲ್ಲಿ ರಶ್ಮಿಕಾ ನಟಿಸಬೇಕಿತ್ತು. ಆದ̧ರೆ, ಈ ಬಿಝಿ ನಟಿಗೆ ದಿನಾಂಕಗಳು ಹೊಂದಿಕೆಯಾಗದ ಕಾರಣ ಅವರು ಸಿನಿಮಾದಿಂದ ಹಿಂದೆ ಸರಿದರು.

ರಾಮ್ ಚರಣ್ ಅಭಿನಯದ ಫ್ಲಾಪ್ ಸಿನಿಮಾ ಗೇಮ್ ಚೇಂಜರ್‌ನಲ್ಲಿ ರಶ್ಮಿಕಾ ನಟಿಸಬೇಕಿತ್ತು ಎಂದು ಹೇಳಲಾಗುತ್ತಿದೆ. ಆದರೆ ಇವರಿಗೆ ನೀಡಿದ ಪಾತ್ರ ಅವರಿಗೆ ಇಷ್ಟವಾಗದ ಕಾರಣ ಅವರ...