ಭಾರತ, ಏಪ್ರಿಲ್ 5 -- Rashmika Mandanna birthday: ಇಂದು (ಏಪ್ರಿಲ್‌ 5) ಕನ್ನಡದ ಕಿರಿಕ್‌ ಪಾರ್ಟಿ, ಅಂಜನಿಪುತ್ರದಲ್ಲಿ ನಟಿಸಿ ಟಾಲಿವುಡ್‌, ಬಾಲಿವುಡ್‌ನಲ್ಲಿ ಖ್ಯಾತಿ ಪಡೆದಿರುವ ರಶ್ಮಿಕಾ ಮಂದಣ್ಣರ ಹುಟ್ಟುಹಬ್ಬ. ತನ್ನ ನಟನೆ, ಸೌಂದರ್ಯದ ಮೂಲಕ ಮೋಡಿ ಮಾಡಿದ ರಶ್ಮಿಕಾ ತನ್ನ ಹುಟ್ಟುಹಬ್ಬವನ್ನು ಆಚರಿಸಲು ಓಮೆನ್‌ಗೆ ತೆರಳಿದ್ದಾರೆ. ಅವರ ಜತೆ ಅವರ ಕ್ಲೋಸ್‌ ಫ್ರೆಂಡ್ಸ್‌ ಕೂಡ ಓಮೆನ್‌ಗೆ ಪ್ರಯಾಣ ಬೆಳೆಸಿದ್ದಾರೆ. ಹಲವು ಸಿನಿಮಾಗಳ ಶೂಟಿಂಗ್‌ನ ಬಿಡುವಿಲ್ಲದ ವೇಳಾಪಟ್ಟಿಯಲ್ಲಿ ಬಿಡುವು ಮಾಡಿಕೊಂಡು ನಟಿ ಓಮೆನ್‌ಗೆ ತೆರಳಿದ್ದಾರೆ. ಮಧ್ಯಪ್ರಾಚ್ಯ ದೇಶದಲ್ಲಿ ಹುಟ್ಟುಹಬ್ಬದ ಪ್ರಯುಕ್ತ ಇವರು ಎಂಜಾಯ್‌ಮೆಂಟ್‌ ಜತೆಗೆ ಅಡ್ವೇಂಚರ್‌ ನಡೆಸಲು ಉದ್ದೇಶಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಿಕಂದರ್‌ ಹೊರತುಪಡಿಸಿ ನೋಡಿದರೆ ರಶ್ಮಿಕಾ ಮಂದಣ್ಣ ಇತ್ತೀಚೆಗೆ ನಟಿಸಿದ ಸಿನಿಮಾಗಳು ಬ್ಲಾಕ್‌ಬಸ್ಟರ್‌ ಹಿಟ್‌ ಆಗಿವೆ. ಬಾಲಿವುಡ್‌ ಮತ್ತು ದಕ್ಷಿಣ ಭಾರತದ ಹಲವು ಸಿನಿಮಾಗಳು ಇವರ ಕೈಯಲ್ಲಿವೆ. ಸದ್ಯ ಭಾರತದ ಅತ್ಯಂತ ಬಿಝಿ ನಟಿ ಇವರು ಎ...