ಭಾರತ, ಫೆಬ್ರವರಿ 28 -- ರಶ್ಮಿಕಾ ಮಂದಣ್ಣ ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ಇದುವರೆಗೆ ಕೇವಲ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್ ನಾಯಕನಾಗಿ ನಟಿಸಿದ ಚಮಕ್ ಕೂಡ ಒಂದು.

ರೊಮ್ಯಾಂಟಿಕ್ ಎಂಟರ್‌ಟ್ರೈನರ್ ಸಿನಿಮಾ ಇದಾಗಿದ್ದು, ಹೇಳುವಂತಹ ಯಶಸ್ಸು ಕಂಡಿರಲಿಲ್ಲ. ಆದರೂ ಅಭಿಮಾನಿಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದರು.

ಚಮಕ್ ಚಿತ್ರವನ್ನು ತೆಲುಗಿನಲ್ಲಿ ಗೀತಾ ಚಲೋ ಎಂಬ ಹೆಸರಿನಲ್ಲಿ ಡಬ್ ಮಾಡಲಾಯಿತು. ತೆಲುಗು ಆವೃತ್ತಿಯು ಯೂಟ್ಯೂಬ್‌ನಲ್ಲಿ ಉಚಿತವಾಗಿ ಸ್ಟ್ರೀಮಿಂಗ್ ಆಗುತ್ತಿದೆ.

ಗೀತಾ ಚಲೋ ತೆಲುಗು ಆವೃತ್ತಿಯು ಯೂಟ್ಯೂಬ್‌ನಲ್ಲಿ 16 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಯನ್ನು ಗಳಿಸಿದೆ.

ಚಿತ್ರದ ನಾಯಕಿ ಖುಷಿ, ಕೃಷ್ಣ ಎನ್ನುವ ಸ್ತ್ರೀರೋಗ ತಜ್ಞನನ್ನು ಮದುವೆಯಾಗುತ್ತಾಳೆ. ಮದುವೆಯ ನಂತರ ಖುಷಿ ತನ್ನ ಸ್ತ್ರೀರೋಗ ತಜ್ಞ ಪತಿಯ ಬಗ್ಗೆ ಕಲಿತ ಸತ್ಯಗಳೇನು? ಈ ಚಿತ್ರವು ಇಬ್ಬರ ನಡುವಿನ ಪೈಪೋಟಿಗೆ ಕಾರಣವೇನು ಎಂಬ ಅಂಶದೊಂದಿಗೆ ಪ್ರಾರಂಭವಾಗುತ್ತದೆ. ಸಿಂಪಲ್ ಸುನಿ ಈ ಸಿನಿಮಾ ನಿರ್ದೇ...