Bengaluru, ಏಪ್ರಿಲ್ 6 -- ಬಾಲಿವುಡ್ ನಟ ಸಲ್ಮಾನ್ ಖಾನ್ ಅವರೊಂದಿಗೆ ಸಿಕ್ಕಿಂದರ್ ಚಿತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಈದ್‌ ಹಬ್ಬದ ಪ್ರಯುಕ್ತ ಆ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗಿತ್ತು. ಆದರೆ, ಆ ಸಿನಿಮಾಕ್ಕೆ ನಿರೀಕ್ಷಿತ ಗುರಿ ಮುಟ್ಟಲಿಲ್ಲ.

ಇದೀಗ ರಶ್ಮಿಕಾ ಯಾವ ಸಿನಿಮಾ ಮೂಲಕ ಆಗಮಿಸಲಿದ್ದಾರೆ ಎಂಬುದಕ್ಕೆ ಸುಳಿವು ಸಿಕ್ಕಿದೆ. ಗರ್ಲ್‌ಫ್ರೆಂಡ್‌ ಸಿನಿಮಾದಿಂದ ಅವರ ಹೊಸ ಲುಕ್‌ ಹೊರಬಿದ್ದಿದೆ.

ದಿ ಗರ್ಲ್‌ಫ್ರೆಂಡ್ ಚಿತ್ರದಲ್ಲಿ ಸ್ಯಾಂಡಲ್‌ವುಡ್‌ ನಟ ದೀಕ್ಷಿತ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ನಿರ್ದೇಶಕ ರಾಹುಲ್ ರವೀಂದ್ರನ್ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ.

ನಿರ್ಮಾಪಕ ಅಲ್ಲು ಅರವಿಂದ್ ಅವರ ಗೀತಾ ಆರ್ಟ್ಸ್, ಮಾಸ್ ಮೂವಿ ಮೇಕರ್ಸ್, ಧೀರಜ್ ಮೊಗಿಲಿನೇನಿ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ಗಳು ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

ದಿ ಗರ್ಲ್‌ಫ್ರೆಂಡ್ ಪೋಸ್ಟರ್‌ನಲ್ಲಿ ರಶ್ಮಿಕಾ ಮಂದಣ್ಣ ವಾರಿಯರ್ ಲುಕ್‌ನಲ್ಲಿ ಬಂದೂಕು ಮತ್ತು ಕತ್ತಿಯೊಂದಿಗೆ ಹಿಮಾಲಯದ ಪರ್ವತಗಳ ನಡುವೆ ಕಂ...