ಭಾರತ, ಫೆಬ್ರವರಿ 14 -- Rashmika Mandanna: ವಿಕ್ಕಿ ಕೌಶಾಲ್‌ ಮತ್ತು ರಶ್ಮಿಕಾ ಮಂದಣ್ಣ ನಟನೆಯ "ಛಾವಾ" ಸಿನಿಮಾ ಇಂದು (ಫೆ. 14) ವಿಶ್ವದಾದ್ಯಂತ ಬಿಡುಗಡೆ ಆಗಿದೆ. ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಮೊದಲ ದಿನವೇ ಒಂದಷ್ಟು ದಾಖಲೆಗಳನ್ನು ಈ ಸಿನಿಮಾ ನಿರ್ಮಾಣ ಮಾಡುವ ಸಾಧ್ಯತೆಗಳಿವೆ. ಅದಾಗ್ಯೂ, ಇದೇ ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಇದೀಗ ಮತ್ತೆ ಪರೋಕ್ಷವಾಗಿ ಕನ್ನಡಿಗರನ್ನು ಕೆಣಕಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗೆ ಆಹಾರವಾಗುತ್ತಿದ್ದಾರೆ.

ಸ್ಯಾಂಡಲ್‌ವುಡ್‌ ಮೂಲಕ ಬಣ್ಣದ ಲೋಕಕ್ಕೆ ಬಂದು ಸದ್ಯ ಟಾಲಿವುಡ್‌ನಲ್ಲಿಯೇ ಹೆಚ್ಚು ಗುರುತಿಸಿಕೊಂಡು, ಬಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ ರಶ್ಮಿಕಾ ಮಂದಣ್ಣ. ನ್ಯಾಶನಲ್‌ ಕ್ರಶ್‌ ಎಂಬ ಪಟ್ಟ ಪಡೆದ ಈ ನಟಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಆದರೆ, ಕರ್ನಾಟಕದಲ್ಲಿ ಈ ನಟಿಯನ್ನು ದ್ವೇಷಿಸುವವರ ಸಂಖ್ಯೆಯೂ ದೊಡ್ಡದಿದೆ. ಅದಕ್ಕೆ ಕಾರಣ; ಈ ಹಿಂದಿನ ಹಲವು ಘಟನೆಗಳು. ಇದೀಗ ಇದೇ ನಟಿ ಮತ್ತೆ ಕನ್ನಡಿಗರನ್ನು ಕೆಣಕಿದ್ದಾರೆ. ಛಾವಾ ಸಿನಿಮಾ ಪ್ರಚಾರದ...