ಭಾರತ, ಮಾರ್ಚ್ 6 -- Ranya Rao: ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ ಚಿನ್ನಸಾಗಾಟ ಮಾಡುತ್ತಿದ್ದಾಗ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಸೋಮವಾರ (ಮಾರ್ಚ್ 3) ಬೆಳಗ್ಗೆ ಸಿಕ್ಕಿಬಿದ್ದಿರುವ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ. ಚಿನ್ನ ಸ್ಮಗ್ಲಿಂಗ್ ಮಾಡಿರುವ ಸಂಬಂಧ ಪೊಲೀಸರು ವಿಚಾರಣೆಯನ್ನು ನಡೆಸುತ್ತಿದ್ದು, ಬಗೆದಷ್ಟು ಮಾಹಿತಿ ಹೊರ ಬರುತ್ತಿದೆ. ಇದರ ನಡುವೆ ಆರೋಪಿ ರನ್ಯಾ ರಾವ್ ಅವರ ಸಾಕು ತಂದೆ ಯಾರು, ಈ ಪ್ರಕರಣಕ್ಕೂ ಅವರಿಗೂ ಸಂಬಂಧ ಇದೆಯಾ ಎಂಬುದರ ಚರ್ಚೆಗಳ ನಡುವೆ ರನ್ಯಾ ರಾವ್ ಅವರ ಸಾಕು ತಂದೆ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಬಂಧಿತ ನಟಿ ಪೊಲೀಸ್ ಸಂಪರ್ಕಗಳನ್ನು ಬಳಸಿದ್ದಾರೆ ಎಂಬ ಊಹಾಪೋಹಗಳ ಮಧ್ಯೆ, ಡಿಜಿಪಿ ಕೆ ರಾಮಚಂದ್ರ ರಾವ್ ಅವರು ತಮ್ಮ ಸಾಕು ಮಗಳ ಈ ಪ್ರಕಣದಿಂದ ಅಂತರ ಕಾಯ್ದುಕೊಂಡಿದ್ದಾರೆ. "ನನ್ನ ಸಾಕು ಮಗಳ ಚಟುವಟಿಕೆಗಳೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ಅವಳು ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದಳು. ಅಂದಿನಿಂದ ನಮ್ಮೊಂದಿಗೆ ಸಂಪರ್ಕದಲ್ಲಿ ಇಲ್ಲ. ಈ ಪ್ರಕರಣದಲ್ಲಿ ಕಾನೂನು...