ಭಾರತ, ಮಾರ್ಚ್ 6 -- ಬೆಂಗಳೂರು: ಚಿನ್ನ ಕಳ್ಳ ಸಾಗಣೆ ಮಾಡುವಂತೆ ನನ್ನನ್ನು ಬ್ಲ್ಯಾಕ್‌ಮೇಲ್‌ ಮಾಡಲಾಗಿದೆ ಎಂದು ಕನ್ನಡ ನಟಿ ರನ್ಯಾ ರಾವ್‌ ತನಿಖೆಯ ಸಮಯದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಚಿನ್ನ ಕಳ್ಳಸಾಗಣೆ ಮಾಡಿದ್ದಕ್ಕಾಗಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ)ದ ಅಧಿಕಾರಿಗಳು ಈಕೆ ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ನಟಿಯ ಈ ರೀತಿ ಹೇಳಿಕೆ ನೀಡಿದ್ದು, ಅನಿವಾರ್ಯವಾಗಿ ಕಳ್ಳ ಸಾಗಣೆ ಮಾಡುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಕಾನ್‌ಸ್ಟೆಬಲ್ ಬಸವರಾಜು ಅವರನ್ನು ವಶಕ್ಕೆ ಪಡೆಯಲಾಗಿದೆ. ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್‌ಗೆ ಸಹಾಯ ಮಾಡುವಲ್ಲಿ ಭಾಗಿಯಾಗಿರುವ ಬಗ್ಗೆ ಕಾನ್‌ಸ್ಟೆಬಲ್ ಬಸವರಾಜು ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮಾರ್ಚ್‌ 4ರಂದು ರನ್ಯಾ ರಾವ್‌ ಅವರನ್ನು ಬಂಧಿಸಿದ ಬಳಿಕ ಅಧಿಕಾರಿಗಳು ಲ್ಯಾವೆಲ್ಲೆ ರಸ್ತೆಯ ನಂದ್ವಾನಿ ಮ್ಯಾನ್ಷನ್‌ನಲ್ಲಿರುವ ಆಕೆಯ ನಿವಾ...