Bangalore, ಫೆಬ್ರವರಿ 11 -- Ranveer Allahbadia: ಪೋಷಕರ ಲೈಂಗಿಕತೆ ಕುರಿತು ಅಸೂಕ್ಷ್ಮವಾಗಿ ಹೇಳಿಕೆ ನೀಡಿ ವ್ಯಾಪಕವಾಗಿ ಟೀಕೆಗೆ ಒಳಗಾಗಿದ್ದ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ ಇದೀಗ ಸಾರ್ವಜನಿಕವಾಗಿ ಸೋಷಿಯಲ್‌ ಮೀಡಿಯಾದಲ್ಲಿ ಕ್ಷಮೆ ಯಾಚಿಸಿದ್ದಾರೆ. "ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌ನಲ್ಲಿ ನಾನು ಹಾಗೇ ಹೇಳಬಾರದಿತ್ತು, ಕ್ಷಮಿಸಿ" ಎಂದು ಅವರು ಎಕ್ಸ್‌ನಲ್ಲಿ ವಿಡಿಯೋ ಮೂಲಕ ಕ್ಷಮೆ ಯಾಚಿಸಿದ್ದಾರೆ. ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ ಅವರು ಇತ್ತೀಚೆಗೆ ಸಮಯ್ ರೈನಾ ಅವರ ಯೂಟ್ಯೂಬ್‌ ಶೋ ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌ನಲ್ಲಿ ವಿವಾದಿತ ಹೇಳಿಕೆ ನೀಡಿದ್ದರು. ಇದರ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ವ್ಯಾಪಕ ಟೀಕೆ, ಮೀಮ್ಸ್‌ ಉಂಟಾಗಿತ್ತು. ಇದೀಗ ಯೂಟ್ಯೂಬರ್‌ ರಣವೀರ್ ಅಲಹಾಬಾದಿಯಾ ಈ ಕುರಿತು ಕ್ಷಮೆ ಕೇಳಿದ್ದಾರೆ.

ರಣವೀರ್ ಅಲಹಾಬಾದಿಯಾ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಕ್ಷಮೆ ಕೇಳಿದ್ದಾರೆ. "ಇಂಡಿಯಾಸ್‌ ಗಾಟ್‌ ಲ್ಯಾಟೆಂಟ್‌ನಲ್ಲಿ ನಾನು ಹಾಗೇ ಹೇಳಬಾರದಿತ್ತು, ಕ್ಷಮಿಸಿ" ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರ...