Bangalore, ಜನವರಿ 31 -- Ransomware attack: ರಾನ್ಸಮ್‌ವೇರ್‌ ದಾಳಿಯ ಕಾರಣದಿಂದಾಗಿ ಕೆಲವು ಐಟಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದಾಗಿ ಜಾಗತಿಕ ಎಂಜಿನಿಯರ್‌ ಸೇವಾ ಕಂಪನಿ ಟಾಟಾ ಟೆಕ್ನಾಲಜೀಸ್‌ ತಿಳಿಸಿದೆ. ಈಗ ಐಟಿ ಸೇವೆಗಳನ್ನು ಪುನರ್‌ ಆರಂಭಿಸಲಾಗಿದೆ. ಡೇಟಾ ಸುರಕ್ಷತೆಗೆ ಸಂಬಂಧಪಟ್ಟಂತೆ ತಜ್ಞರ ಜತ ಸಮಾಲೋಚನೆ ನಡೆಯುತ್ತಿದೆ. ಸಮಸ್ಯೆಯ ಮೂಲ ಕಾರಣವನ್ನು ತಿಳಿಯಲು ವಿವರವಾದ ತನಿಖೆಗೆ ಆದೇಶಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

"ಮುನ್ನೆಚ್ಚರಿಕೆ ಕ್ರಮವಾಗಿ ಕೆಲವು ಐಟಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಈ ಸೇವೆಗಳನ್ನು ಪುನರ್‌ಸ್ಥಾಪಿಸಲಾಗಿದೆ. ಸಮಸ್ಯೆಯ ಮೂಲ ಕಾರಣವನ್ನು ನಿರ್ಣಯಿಸಲು ವಿವರವಾದ ತನಿಖೆಗೆ ಆದೇಶಸಲಾಗಿದೆ" ಎಂದು ಟಾಟಾ ಟೆಕ್ನಾಲಜೀಸ್‌ ಪ್ರಕಟಣೆಯಲ್ಲಿ ತಿಳಿಸಿದೆ.

"ನಮ್ಮ ಕ್ಲೈಂಟ್‌ ವಿತರಣಾ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತವೆ. ಇದರ ಮೇಲೆ ಯಾವುದ ಪರಿಣಾಮ ಬೀರಿಲ್ಲ. ಮೂಲ ಕಾರಣವನ್ನು ನಿರ್ಣಯಿಸಲು, ಪರಿಹಾರ ಕ್ರಮಗಳನ್ನು ಕೈಗೊಳ್ಳಲು ತಜ್ಞರೊಂ...