ಭಾರತ, ಫೆಬ್ರವರಿ 25 -- ಬಾಗಲಕೋಟೆ ಜಿಲ್ಲೆ ರನ್ನನ ನಾಡು ಮುಧೋಳದಲ್ಲಿ ನಡೆದ ರನ್ನ ವೈಭವ 2025 ರ ಕೊನೆಯ ಅಕ್ಷರಶಃ ನಕ್ಷತ್ರಗಳ ಲೋಕ. ಗಾಯಕ ವಿಜಯಪ್ರಕಾಶ್‌ ಹಾಗೂ ಗಾಯಕಿ ಅನುರಾಧ ಭಟ್‌ ವಿಭಿನ್ನ ಲೋಕವನ್ನೇ ಸೃಷ್ಟಿಸಿದರು.

ಮುಧೋಳದಲ್ಲಿ ನಡೆದ ರನ್ನ ವೈಭವದ ತಾರಾ ರಾತ್ರಿ ಕಾರ್ಯಕ್ರಮ ಹಳೆಯ ಹಾಗೂ ಹೊಸ ಹಾಡುಗಳ ಸಂಗಮದಂತಿತ್ತು. ಬೊಂಬೆ ಹೇಳುತೈತೆ. ನೀನೆ ಯಜಮಾನ ಎನ್ನುವ ವಿಜಯಪ್ರಕಾಶ್‌ ಹಾಡಿಗೆ ಭಾರೀ ಕರತಾಡನವೇ ದೊರೆಯಿತು.

ಗಾಯಕ ವಿಜಯಪ್ರಕಾಶ್‌ ಹಾಗೂ ಗಾಯಕಿ ಅನುರಾಧ ಭಟ್‌ ಅವರೊಂದಿಗೆ ನಟಿ ರಚಿತಾರಾಮ್‌ ಅವರು ಮೀಟ್‌ ಮಾಡೋಣ ಇಲ್ಲ ಹೇಟ್‌ ಮಾಡೋಣ ಹಾಡಿಗೆ ದನಿಯಾದರು.

ನಟಿ ರಚಿತಾರಾಮ್‌ ಅವರಂತೂ ಇಡೀ ಕಾರ್ಯಕ್ರಮದ ಆಕರ್ಷಣಯಾಗಿದ್ದರು. ಅವರ ಹಲವು ಹಾಡಿಗಳಿಗೆ ಅನುರಾಧ ಭಟ್‌ ದನಿಯಾದರು.

ಅನುರಾಧ ಭಟ್‌ ಅವರು ಅಪ್ಪ ಐ ಲವ್‌ ಯೂ ಅಪ್ಪ ಎನ್ನುವ ಹಾಡು ಹಾಡಿ ಜನಸಮೂಹ ತಲೆದೂಗುವಂತೆ ಮಾಡಿದರು.

ಅನುರಾಧ ಭಟ್‌ ಪ್ರಸ್ತುತಪಡಿಸಿದ ಕೇಳಿಸಿದೆ ಕಲ್ಲು ಕಲ್ಲಿನಲಿ ಕನ್ನಡ ನುಡಿ ಹಾಡು ಕೂಡ ಗಮನ ಸೆಳೆಯಿತು.

ಮುಧೋಳ ರನ್ನ ವೈಭವದಲ್ಲಿ...