Mudhol, ಫೆಬ್ರವರಿ 24 -- ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ರನ್ನ ವೈಭವ 2025 ಶನಿವಾರವೇ ಆರಂಭಗೊಂಡಿದ್ದು ಸೋಮವಾರ ಮುಕ್ತಾಯಗೊಳ್ಳಲಿದೆ.

ಹತ್ತನೇ ಶತಮಾನದಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ ರನ್ನ ಅಂದರೆ ನೆನಪಾಗೋದು ಗದಾಯುದ್ದ. ಶತಮಾನಗಳ ಹಿಂದೆಯೇ ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಬೆಳಗಲಿಯಲ್ಲಿ ಜನಿಸಿದ ರನ್ನ ಕನ್ನಡ ಸಾಹಿತ್ಯದಲ್ಲಿ ಅಜರಾಮರ ಹೆಸರು.

ಕವಿ ಚಕ್ರವತಿ ಸಹಿತ ಹಲವು ಬಿರುದು ಬಾವಲಿಗಳನ್ನು ಪಡೆದುಕೊಂಡ ರನ್ನ ಅಜಿತ ಪುರಾಣ, ಪರುಶರಾಮ ಚರಿತೆ, ಚಕ್ರೇಶ್ವರ ಚರಿತೆ, ಸಾಹಸ ಭೀಮ ವಿಜಯಂ ಸಹಿತ ಪ್ರಮುಖ ಕೃತಿಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ.

ಕರ್ನಾಟಕ ಸರ್ಕಾರ ಹಿಂದಿನಿಂದಲೂ ರನ್ನ ವೈಭವ ಉತ್ಸವ ಆಯೋಜಿಸಿಕೊಂಡು ಬರುತ್ತಿದೆ. ಕೋವಿಡ್‌ ಸೇರಿ ನಾನಾ ಕಾರಣದಿಂದ ಆರು ವರ್ಷ ಆಚರಿಸಿರಲಿಲ್ಲ. ಈಗ ಅಬಕಾರಿ ಸಚಿವ ಹಾಗೂ ಮುಧೋಳ ಶಾಸಕರೂ ಆಗಿರುವ ಆರ್.ಬಿ.ತಿಮ್ಮಾಪುರ ಅವರ ಆಸಕ್ತಿಯಿಂದ ರನ್ನ ವೈಭವ ಈ ಬಾರಿ ನಡೆದಿದ್ದು ರನ್ನದ ಗದಾಯುದ್ದದ ರೂಪಕವಾಗಿ ಗಧೆ ಗಮನ ಸೆಳೆದಿದೆ....