Bengaluru, ಮಾರ್ಚ್ 4 -- ಬೆಂಗಳೂರು: ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಇತ್ತೀಚೆಗೆ ಸ್ಯಾಂಡಲ್‌ವುಡ್‌ ಕಲಾವಿದರ ಕುರಿತು ಕಿಡಿಕಾರಿದ್ದರು. ಚಿತ್ರರಂಗದ ಕಲಾವಿದರ ನಟ್ಟು ಬೋಲ್ಟ್‌ ಟೈಟ್‌ ಮಾಡುವೆ ಎಂದು ಡಿಕೆಶಿ ಹೇಳಿರುವ ಮಾತು ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಇದೇ ಸಮಯದಲ್ಲಿ ಚಿತ್ರನಟಿ , ರಾಜಕಾರಣಿ ರಮ್ಯಾ ಅವರು ಡಿಕೆ ಶಿವಕುಮಾರ್‌ ಅವರ ಹೇಳಿಕೆಯನ್ನು ಸಮರ್ಥಿಸಿ ಹೇಳಿಕೆ ನೀಡಿದ್ದರು. ಇದೀಗ ನಟಿ ರಮ್ಯಾ ಸೋಷಿಯಲ್‌ ಮೀಡಿಯಾದಲ್ಲಿ ಯು ಟರ್ನ್‌ ಹೊಡೆದಿದ್ದಾರೆ. ಡಿಕೆಶಿ ಮಾತನ್ನು ಒಪ್ಪದ ಅವರು "ಕಲಾವಿದರು ರಾಜಕಾರಣಿಗಳಿಗೆ ಸಾಫ್ಟ್‌ ಟಾರ್ಗೆಟ್‌ ಆಗುತ್ತಿದ್ದಾರೆ" ಎಂದಿದ್ದಾರೆ.

"ಡಿಕೆ ಶಿವಕುಮಾರ್‌ ಅವರು ಹೇಳಿದ್ದು ಸಂಪೂರ್ಣವಾಗಿ ತಪ್ಪಲ್ಲ. ಕಲಾವಿದರು ಸಾರ್ವಜನಿಕರ ಮೇಲೆ ದೊಡ್ಡಮಟ್ಟದ ಪ್ರಭಾವ ಬೀರುತ್ತಾರೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ನಮ್ಮ ನಂಬಿಕೆಗಳಿಗೆ ತಕ್ಕಂತೆ ನಾವು ಆಗಾಗ ಧ್ವನಿ ಎತ್ತುತ್ತೇವೆ. ನೀವು ಯಾವ ಕಡೆಗೆ ಇದ್ದೀರೋ ಆ ವಿಚಾರಕ್ಕೆ ತಕ್ಕಂತೆ ಧ್ವನಿ ಎತ್ತುವಿರಿ. ಪ್ರಜಾಪ್ರಭುತ್ವದ...