ಭಾರತ, ಫೆಬ್ರವರಿ 3 -- ಭಾರತದ ಪ್ರಸಿದ್ಧ ಧಾರ್ಮಿಕ ಗ್ರಂಥಗಳಲ್ಲಿ ರಾಮಾಯಣ ಮುಖ್ಯವಾದುದು. ಇದು ಕೇವಲ ಧರ್ಮಗ್ರಂಥವಷ್ಟೇ ಅಲ್ಲ, ಬದುಕಿನ ಪಾಠ ಹೇಳುವ ಮಹಾಕಾವ್ಯವೂ ಹೌದು. ರಾಮಾಯಣವು ಪ್ರಭು ಶ್ರೀರಾಮನ ಆದರ್ಶ ಜೀವನದ ಕುರಿತು ಜಗತ್ತಿಗೆ ಪರಿಚಯಿಸುವ ಜೊತೆಗೆ ಎಲ್ಲ ಕಾಲಕ್ಕೂ ಸಲ್ಲುವಂತಹ ಜೀವನಪಾಠಗಳನ್ನೂ ಹೊಂದಿದೆ. ಇದು ಕೆಟ್ಟದ್ದರ ವಿರುದ್ಧ ಒಳ್ಳೆತನದ ಗೆಲುವು ಸಾರುವ ಅಂಶವನ್ನು ಮಾತ್ರ ಹೊಂದಿಲ್ಲ. ಎಂದೆಂದಿಗೂ ಪ್ರಸ್ತುತ ಎನ್ನಿಸುವ ಕಾಲಾತೀತ ಜೀವನ ಪಾಠಗಳು, ನೈತಿಕ ಮಾರ್ಗದರ್ಶನ ಮತ್ತು ಆಧ್ಯಾತ್ಮಿಕ ಒಳನೋಟಗಳನ್ನು ಹೊಂದಿದೆ. ರಾಮಾಯಣವೂ ತೇತ್ರಾಯುಗದ ಕಥೆಯನ್ನು ಹೊಂದಿದ್ದರೂ ಕಲಿಯುಗದಲ್ಲೂ ಇದರಿಂದ ಕಲಿಯಬಹುದಾದ ಸಾಕಷ್ಟು ಜೀವನಪಾಠಗಳಿವೆ. ರಾಮಾಯಣದಿಂದ ನಾವು ಅಳವಡಿಸಿಕೊಳ್ಳಬಹುದಾದ 10 ಜೀವನಪಾಠಗಳ ಬಗ್ಗೆ ಇಲ್ಲಿ ಹೇಳಲಾಗಿದೆ.

ಶ್ರೀರಾಮನು ಎಲ್ಲದ್ದಕ್ಕಿಂತ ಧರ್ಮ, ಕರ್ತವ್ಯ ಮುಖ್ಯ ಎಂದು ನಂಬಿದ್ದನು. ವೈಯಕ್ತಿಕ ಬದುಕಿನಲ್ಲಿ ಸಾಕಷ್ಟು ಕಳೆದುಕೊಂಡಿದ್ದರು, ರಾಮ ತನ್ನ ಕರ್ತವ್ಯಗಳಿಗೆ ತೋರಿದ ಅಚಲ ಬದ್ಧತೆಯು ಜವಾಬ್ದಾರಿಗಳ...