Bengaluru, ಮಾರ್ಚ್ 3 -- 'ಕಾದಿರುವ‌ಳು ಶಬರಿ ರಾಮ ಬರುವನೆಂದು, ತನ್ನ ಪೂಜೆಗೊಳುವನೆಂದು, ವನವನವ ಸುತ್ತಿ ಸುಳಿದು ತರುತರುವನಲೆದು ತಿರಿದು' ಇದು ಕನ್ನಡ ಜನಪ್ರಿಯ ಹಾಡು. ಇದರಲ್ಲಿ ಶಬರಿ ರಾಮನಿಗಾಗಿ ಯಾವ ರೀತಿ ಕಾದಿದ್ದಾಳೆ ಎಂದು ವರ್ಣಿಸಲಾಗಿದೆ. ರಾಮಾಯಣದ ಕಥೆ ತಿಳಿದಿರುವ ಪ್ರತಿಯೊಬ್ಬರಿಗೂ ಶಬರಿಯ ಬಗ್ಗೆ ತಿಳಿದೇ ಇರುತ್ತದೆ. ರಾಮನ ದರ್ಶನಕ್ಕಾಗಿಯೇ ತನ್ನ ಸಂಪೂರ್ಣ ಜೀವನವನ್ನು ಸವೆಸಿದ ಶ್ರೀರಾಮನ ಪರಮ ಭಕ್ತೆ ಶಬರಿ. ನಿಷ್ಕಲ್ಮಷವಾದ ಭಕ್ತಿಗೆ ಇನ್ನೊಂದು ಹೆಸರೇ ಶಬರಿ. ತನ್ನ ಜೀವನದುದ್ದಕ್ಕೂ ಶ್ರೀರಾಮನಿಗಾಗಿ ಕಾಯುತ್ತಾ, ಅವನ ಧ್ಯಾನದಲ್ಲೆ ಮುಳುಗಿದ್ದವಳು ಶಬರಿ. ಪೌರಾಣಿಕ ಕಥೆಗಳ ಪ್ರಕಾರ, ತ್ರೇತಾಯುಗದ ಫಾಲ್ಗುಣ ಮಾಸದ, ಕೃಷ್ಣ ಪಕ್ಷದ ಏಳನೇ ದಿನದಂದು ಶಬರಿ ಶ್ರೀರಾಮನನ್ನು ಭೇಟಿಯಾಗುತ್ತಾಳೆ. ಆ ದಿನದಂದು ಶಬರಿ ಮಾತೆಯು ಮೋಕ್ಷವನ್ನು ಪಡೆದಳು ಎಂದು ಹೇಳಲಾಗುತ್ತದೆ. ಹಲವು ವರ್ಷಗಳ ಶಬರಿಯ ಕಾಯುವಿಕೆ ಆ ದಿನದಂದು ಮುಕ್ತಾಯಗೊಂಡಿತ್ತು. ಶ್ರೀರಾಮನ ಚರಣ ಕಮಲದಲ್ಲೇ ಶಬರಿಗೆ ಮುಕ್ತಿಯು ದೊರೆಯಿತು.

ಶಬರಿಯ ಹೆಸರು ಶ್ರಮಣ...