ಭಾರತ, ಮಾರ್ಚ್ 4 -- Ramam Raghavam OTT: ಸಮುದ್ರಖನಿ ನಟಿಸಿದ ಇತ್ತೀಚಿನ ಚಿತ್ರ ರಾಮಂ ರಾಘವಂ ಅನ್ನು ಮನೆಯಲ್ಲಿಯೇ ನೋಡಲು ಸಾಕಷ್ಟು ಜನರು ಕಾಯುತ್ತಿರಬಹುದು. ಇದು ಧನರಾಜ್ ನಿರ್ದೇಶನದ ಮೊದಲ ಸಿನಿಮಾ. ಈ ಸಿನಿಮಾದಲ್ಲಿ ಸಮುದ್ರಖನಿ ಮತ್ತು ಧನರಾಜ್‌ ತಂದೆಮಗನಾಗಿ ನಟಿಸಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾ ನಿರೀಕ್ಷಿತ ಯಶಸ್ಸು ಪಡೆದಿಲ್ಲ. ಆದರೆ, ಈ ಸಿನಿಮಾದ ಕುರಿತು ಸಾಕಷ್ಟು ಜನರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದೀಗ ವರದಿಗಳ ಪ್ರಕಾರ, ಈ ಸಿನಿಮಾದ ಡಿಜಿಟಲ್‌ ಹಕ್ಕು ಉತ್ತಮ ಬೆಲೆಗೆ ಮಾರಾಟವಾಗಿದೆ. ಈ ಮೂಲಕ ನಿರ್ಮಾಪಕರನ್ನ ಸುರಕ್ಷಿತವಾಗಿಸಿದೆ. ಈಟಿವಿ ವಿನ್ ಅಧಿಕೃತವಾಗಿ ರಾಮಂ ರಾಘವಂ ಚಿತ್ರದ ಒಟಿಟಿ ಹಕ್ಕುಗಳನ್ನು ಪಡೆದಿದೆ. ಈ ಸಿನಿಮಾವು ಈ ಮಾರ್ಚ್‌ ತಿಂಗಳ ಎರಡನೇ ವಾರದಲ್ಲಿ ಒಟಿಟಿಯಲ್ಲಿ ಸ್ಟ್ರೀಮಿಂಗ್‌ ಆಗುವ ಸೂಚನೆಯಿದೆ. ಇದು ತಂದೆ ಮತ್ತು ಮಗನ ಬಾಂಧವ್ಯದ ಕಥೆಯನ್ನು ಹೊಂದಿದೆ. ಇಲ್ಲಿ ಮಗ ದಾರಿ ತಪ್ಪಿ ನಿರಂತರ ತೊಂದರೆ ಅನುಭವಿಸುತ್ತಾನೆ.

ಇದರಿಂದ ಮಗನಲ್ಲಿ ಹತಾಶೆ ಹೆಚ್ಚುತ್ತದೆ. ವಿಮಾ ಹ...